ಯಾದಗಿರಿ : ಮಾಜಿ ಸಚಿವ ರಾಜುಗೌಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾದಗಿರಿ ನಗರದ ಗಂಜ್ ಬಳಿ ಈ ಘಟನೆ ನಡೆದಿದೆ. ರಾಜುಗೌಡ ಪ್ರಯಾಣಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಅದೃಷವಶಾತ್ ರಾಜುಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯದೊಂದಿಗೆ ಅವರು ಪಾರಾಗಿದ್ದಾರೆ.
ಸಿಸಿಎಲ್ ಮೊದಲ ಪಂದ್ಯ ಮುಗಿಸಿ ಹೈದರಾಬಾದ್ ಮೂಲಕ ಯಾದಗಿರಿಗೆ ರಾಜುಗೌಡ ಅವರು ಮರಳುತ್ತಿದ್ದರು. ಯಾದಗಿರಿ ಹೈವೇ ಗಂಜ್ ಬಳಿ ಟಿಪ್ಪರ್ ಒಂದು ಅವರ ಕಾರಿಗೆ ಹಿಂದಿನಿಂದ ಗುದ್ದಿದೆ. ಪರಿಣಾಮ ಕಾರು ನಿಯಂತ್ರಣ ತಪ್ಪಿದೆ. ರಾಜುಗೌಡ ಹಾಗೂ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಂತರ ಆಸ್ಪತ್ರೆಗೆ ತೆರಳಿದ ರಾಜುಗೌಡ ಚಿಕಿತ್ಸೆ ಪಡೆದು ಬೇರೆ ಕಾರಿನಲ್ಲಿ ಸುರಪುರಕ್ಕೆ ತೆರಳಿದ್ದಾರೆ. ಟಿಪ್ಪರ್ ಚಾಲಕನನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

