HomeIndiaನ್ಯಾಯ ಸಿಕ್ಕಿತು ಆದರೆ ಜೀವ ಉಳಿಯಲಿಲ್ಲ; ಗುಜರಾತ್ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಹೃದಯಾಘಾತದಿಂದ ನಿರಪರಾಧಿ ಸಾವು

ನ್ಯಾಯ ಸಿಕ್ಕಿತು ಆದರೆ ಜೀವ ಉಳಿಯಲಿಲ್ಲ; ಗುಜರಾತ್ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಹೃದಯಾಘಾತದಿಂದ ನಿರಪರಾಧಿ ಸಾವು

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬ ಎಂತಹ ಕರಾಳ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಗುಜರಾತ್‌ನ ಈ ಘಟನೆ ಕಣ್ಣೀರಿಸುವಂತಿದೆ. ಕೇವಲ 20 ರೂಪಾಯಿ ಲಂಚ ಪಡೆದ ಆರೋಪ ಹೊತ್ತು, ಸಮಾಜದಲ್ಲಿನ ಅಪಮಾನದ ನಡುವೆಯೇ ಮೂರು ದಶಕಗಳ ಕಾಲ ಹೋರಾಡಿದ ವ್ಯಕ್ತಿಯೊಬ್ಬರು, ನ್ಯಾಯಾಲಯದಿಂದ ‘ನಿರಪರಾಧಿ’ ಎಂಬ ಪಟ್ಟ ಸಿಕ್ಕ ಮರುದಿನವೇ ಸಾವನ್ನಪ್ಪಿದ್ದಾರೆ.

ಅಹಮದಾಬಾದ್‌ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಬುಭಾಯಿ ಪ್ರಜಾಪತಿ ಎಂಬುವವರ ಮೇಲೆ 1990ರ ದಶಕದಲ್ಲಿ 20 ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಈ ಸಣ್ಣ ಮೊತ್ತದ ಆರೋಪ ಅವರ ಬದುಕನ್ನೇ ನರಕವಾಗಿಸಿತ್ತು. 1997ರಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿ, 2004ರಲ್ಲಿ ಸೆಷನ್ಸ್ ನ್ಯಾಯಾಲಯ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು. ಅಂದಿನಿಂದ ಸತತ 22 ವರ್ಷಗಳ ಕಾಲ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ತಮ್ಮ ಮೇಲಿನ ಕಳಂಕ ಅಳಿಸಿಕೊಳ್ಳಲು ಕಾನೂನು ಹೋರಾಟ ನಡೆಸುತ್ತಲೇ ಬಂದಿದ್ದರು.

ಫೆಬ್ರವರಿ 4 ರಂದು ಹೈಕೋರ್ಟ್ ಅಂತಿಮ ತೀರ್ಪು ನೀಡಿತು. ಸಾಕ್ಷ್ಯಾಧಾರಗಳ ಕೊರತೆ ಮತ್ತು ಹೇಳಿಕೆಗಳಲ್ಲಿನ ವಿರೋಧಾಭಾಸಗಳನ್ನು ಗಮನಿಸಿದ ನ್ಯಾಯಾಲಯ, ಬಾಬುಭಾಯಿ ನಿರಪರಾಧಿ ಎಂದು ಘೋಷಿಸಿತು. ತೀರ್ಪು ಬಂದ ದಿನ ವಕೀಲರ ಕಚೇರಿಯಲ್ಲಿ ಮಾತನಾಡಿದ್ದ ಬಾಬುಭಾಯಿ, “ನನ್ನ ಬದುಕಿನ ಮೇಲಿದ್ದ ಕಳಂಕ ಅಳಿದಿದೆ. ಈಗ ದೇವರು ನನ್ನನ್ನು ಕರೆಸಿಕೊಂಡರೂ ನನಗೆ ಯಾವುದೇ ದುಃಖವಿಲ್ಲ” ಎಂದು ಭಾವುಕರಾಗಿ ನುಡಿದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಪರ್ಯಾಸವೆಂದರೆ, ಅವರ ಮಾತು ಅಕ್ಷರಶಃ ನಿಜವಾಯಿತು. ತೀರ್ಪು ಬಂದ ಸಂತಸದಲ್ಲಿ ಮನೆಗೆ ಮರಳಿದ್ದ ಬಾಬುಭಾಯಿ ಅವರಿಗೆ ಮರುದಿನವೇ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದರು. ತಮಗಾಗಬೇಕಿದ್ದ ಸರ್ಕಾರಿ ಸೌಲಭ್ಯಗಳು ಮತ್ತು ಬಾಕಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಮೊದಲೇ ಅವರು ಇಹಲೋಕ ತ್ಯಜಿಸಿದರು. 30 ವರ್ಷಗಳ ಕಾಲ ಸಮಾಜದ ದೃಷ್ಟಿಯಲ್ಲಿ ‘ಭ್ರಷ್ಟ’ ಎನಿಸಿಕೊಂಡು ನೊಂದಿದ್ದ ಜೀವಕ್ಕೆ ಕೊನೆಗೂ ನ್ಯಾಯ ಸಿಕ್ಕಿತು, ಆದರೆ ಅದನ್ನು ಅನುಭವಿಸಲು ಕಾಲ ಅವಕಾಶ ನೀಡಲಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular