HomeLatest Newsಸುಲಭವಾಗಿ ʼವಾಟರ್‌ ಬಾಟಲ್‌ʼ ಸ್ವಚ್ಛಗೊಳಿಸಲು ಅನುಸರಿಸಿ ಈ ಕ್ರಮ

ಸುಲಭವಾಗಿ ʼವಾಟರ್‌ ಬಾಟಲ್‌ʼ ಸ್ವಚ್ಛಗೊಳಿಸಲು ಅನುಸರಿಸಿ ಈ ಕ್ರಮ

ದಿನ ನಿತ್ಯ ಉಪಯೋಗಿಸುವ ವಸ್ತುಗಳಲ್ಲಿ ನೀರಿನ ಬಾಟಲ್‌ ಗಳು ಮುಖ್ಯವಾದುದು. ಸದಾ ನೀರು ಇರುವುದರಿಂದ ಅವು ಬೇಗ ಪಾಚಿ ಕಟ್ಟುತ್ತವೆ. ಕೆಲವೊಮ್ಮೆ ವಾಸನೆಯಿಂದ ಕೂಡಿರುತ್ತವೆ. ಇದನ್ನು ನಿವಾರಿಸಲು ಕೆಲ ಸುಲಭ ಕ್ರಮಗಳನ್ನು ಅನುಸರಿಸಬೇಕು.

* ಪ್ಲಾಸ್ಟಿಕ್‌ ಬಾಟಲ್‌ ಗಳನ್ನು ಸ್ವಚ್ಛಗೊಳಿಸಲು ಬಾಟಲಿಗೆ ಎರಡು ಚಮಚ ಮೌತ್‌ ಫ್ರೆಶನರ್‌ ಲಿಕ್ವಿಡ್‌ ಹಾಕಿ. ಮುಚ್ಚಳ ಮುಚ್ಚಿ ಚೆನ್ನಾಗಿ ಶೇಕ್‌ ಮಾಡಿ ಕೆಲ ನಿಮಿಷ ಬಿಡಿ. ನಂತರ ಲಿಕ್ವಿಡ್‌ ಸೋಪ್‌ ಹಾಕಿ ನೀರಿನಿಂದ ಸ್ವಚ್ಛಗೊಳಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಬಾಟಲಿಗೆ 3 ರಿಂದ 4 ಚಮಚ ಅಕ್ಕಿ, ಒಂದು ಚಮಚ ಬೇಕಿಂಗ್‌ ಸೋಡಾ, 2 ಚಮಚ ವಿನಿಗರ್‌ ಹಾಕಿ ಚೆನ್ನಾಗಿ ಶೇಕ್‌ ಮಾಡಿ ಸ್ವಲ್ಪ ಸಮಯ ಬಿಟ್ಟು ಲಿಕ್ವಿಡ್‌ ಸೋಪ್‌ ಹಾಕಿ ನೀರಿನಿಂದ ಕ್ಲೀನ್‌ ಮಾಡಿ. ಇದರಿಂದ ಬಾಟಲಿನ ವಾಸನೆ ಹೋಗುತ್ತದೆ.

* ಬಾಟಲಿಗೆ ಎಂಟರಿಂದ ಒಂಬತ್ತು ಐಸ್‌ ಕ್ಯೂಬ್‌, 3 ರಿಂದ 4 ಚಮಚ ಪುಡಿ ಉಪ್ಪು ಹಾಕಿ ನಂತರ ಅದಕ್ಕೆ ಕತ್ತರಿಸಿದ ನಿಂಬೆ ತುಂಡುಗಳನ್ನು ಹಾಕಿ ಚೆನ್ನಾಗಿ ಶೇಕ್‌ ಮಾಡಿ ಸ್ವಲ್ಪ ಸಮಯ ಬಿಡಿ ನಂತರ ಸ್ವಚ್ಛಗೊಳಿಸಿ.

* ಬಾಟಲಿಗಳ ಮುಚ್ಚಳಗಳು ಕಲೆಯಾಗಿದ್ದರೆ, ಅವುಗಳ ಒಳಗೆ ಕೊಳೆ ಕೂತಿದ್ದರೆ, ಅವುಗಳನ್ನು ಲಿಕ್ವಿಡ್‌ ಸೋಪ್‌ ನಲ್ಲಿ ಚೆನ್ನಾಗಿ ನೆನೆಸಿ ನಂತರ ಹಳೆಯ ಟೂತ್‌ ಬ್ರೆಷ್‌ ಅಥವಾ ಚಿಕ್ಕ ಪಾತ್ರೆ ತೊಳೆಯುವ ಸ್ಕ್ರಬ್‌ನಿಂದ ಉಜ್ಜಿ ಸ್ವಚ್ಚಗೊಳಿಸಿ.

For Latest News Updates, Join Our Whatsapp Community🚩
RELATED ARTICLES

Most Popular