ಬಳ್ಳಾರಿ : ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಗೆ ಸೇರಿದ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ರರು ಸೇರಿ ೮ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಿ ಸ್ಕೈರ್ ಲೇಔಟ್ನಲ್ಲಿರುವ ಮಾಡೆಲ್ ಹೌಸ್ ಬೆಂಕಿ ಹಚ್ಚಲಾಗಿತ್ತು.
6 ಅಪ್ರಾಪ್ತ ಬಾಲಕರು ಸೇರಿ 8 ಮಂದಿಯನ್ನು ಕೌಲ್ ಬಜಾರ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಲ್ಲಿ ಇಬ್ಬರು ವಯಸ್ಕರು ಹಾಗೂ 6 ಮಂದಿ ಅಪ್ರಾಪ್ತ ಬಾಲಕರು ಎಂದು ಎಸ್ ಪಿ ಸುಮನ್ ಡಿ ಪನ್ನೇಕರ್ ಮಾಹಿತಿ ನೀಡಿದ್ದಾರೆ.
ಮೊದಲು ಈ ಮಾಡೆಲ್ ಹೌಸ್ ಶ್ರೀರಾಮುಲುಗೆ ಸೇರಿದ್ದು ಎನ್ನಲಾಗಿತ್ತು, ನಂತರ ಬಂದ ಮಾಹಿತಿ ಪ್ರಕಾರ ಇದು ಜನಾರ್ಧನ ರೆಡ್ಡಿ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.
ಬಾಲಕರು ಫೋಟೋಶೂಟ್ ಮಾಡಿಸಲು ಹಾಗೂ ರೀಲ್ಸ್ ಮಾಡಲು ಆಗಾಗ ಈ ಮಾಡೆಲ್ ಹೌಸ್ ಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಬಾಲಕರು ಬೆಂಕಿ ಹಚ್ಚಲು ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ನೂರು ಎಕರೆ ಪ್ರದೇಶದಲ್ಲಿ ಲೇಔಟ್ ಮಾಡಲಾಗಿತ್ತು. ಇದರಲ್ಲಿ ಮನೆ ಖರೀದಿ ಮಾಡುವವರಿಗೆ ತೋರಿಸಲು ಮಾಡೆಲ್ ಹೌಸ್ ನಿರ್ಮಾಣ ಮಾಡಲಾಗಿತ್ತು.

