HomeKarnatakaBIG NEWS: ಜೆಡಿಎಸ್ ಮುಖಂಡನ ತೋಟಕ್ಕೆ ಬೆಂಕಿ; ಅಪಾರ ಪ್ರಮಾಣದ ಬೆಳೆಗಳು ಬೆಂಕಿಗಾಹುತಿ

BIG NEWS: ಜೆಡಿಎಸ್ ಮುಖಂಡನ ತೋಟಕ್ಕೆ ಬೆಂಕಿ; ಅಪಾರ ಪ್ರಮಾಣದ ಬೆಳೆಗಳು ಬೆಂಕಿಗಾಹುತಿ

ಮೈಸೂರು: ಜೆಡಿಎಸ್ ಮುಖಂಡ ಪ್ರಭಾಕರ ಅವರ ತೋಟಕ್ಕೆ ಬೆಂಕಿ ಬಿದ್ದಿದ್ದು, ಅಡಿಕೆ, ತೆಂಗು, ತೇಗದ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ ಚೌಡಿಕಟ್ಟೆ ರಸ್ತೆಯ ತೋಟದಲ್ಲಿ ಸಂಭವಿಸಿದೆ.

ರಾಜಕೀಯ ಧ್ವೇಷದಿಂದಾಗಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. 6 ಎಕರೆ ಪ್ರದೇಶದ ತೋಟದಲ್ಲಿ ಹಲವು ಬಗೆಯ ಮರಗಳನ್ನು ಬೆಳೆಸಲಾಗಿತ್ತು. 6 ತೆಂಗು, 25 ತೇಗ, 50 ಅಡಿಕೆ ಮರಗಳು ಸುಟ್ಟು ಕರಕಲಾಗಿವೆ. ನಾಲ್ಕು ಲಕ್ಷಕ್ಕೂ ಅಧಿಕಕ ನಷ್ಟವುಂಟಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ದ್ಧಾವಿಸಿ ಬೆಂಕಿ ನಂದಿಸಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular