HomeKarnatakaಧರ್ಮ ಜಾಗೃತಿ ಹೆಸರಲ್ಲಿ ಗ್ರಾಮಸ್ಥರ ಮತಾಂತರ ಆರೋಪ: ಎಫ್ಐಆರ್ ದಾಖಲು

ಧರ್ಮ ಜಾಗೃತಿ ಹೆಸರಲ್ಲಿ ಗ್ರಾಮಸ್ಥರ ಮತಾಂತರ ಆರೋಪ: ಎಫ್ಐಆರ್ ದಾಖಲು

ಕಲಬುರಗಿ: ಕಲಬುರಗಿ ಹೊರವಲಯದ ಶರಣ ಶಿರಸಗಿ ಗ್ರಾಮದ ಜನರನ್ನು ಧರ್ಮ ಜಾಗೃತಿ ಹೆಸರಲ್ಲಿ ಮತಾಂತರ ಮಾಡಲಾಗುತ್ತಿದೆ ಎನ್ನುವ ಆರೋಪದ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಎವರ್ ಲಾಸ್ಟಿಂಗ್ ಲೈಫ್ ಫಾದರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾರ್ಚ್ 8ರಂದು ಹತ್ತರಿಂದ ಇಪ್ಪತ್ತು ಜನ ಶರಣ ಸಿರಸಗಿ ಗ್ರಾಮಕ್ಕೆ ಬಂದಿದ್ದು, ಧರ್ಮ ಜಾಗೃತಿ ಹೆಸರಲ್ಲಿ ಹಿಂದೂಗಳ ಮನೆಗಳಿಗೆ ತೆರಳಿ ಯೇಸು ಕ್ರಿಸ್ತ ನಿಮ್ಮ ಯಾವುದೇ ಸಮಸ್ಯೆ ಬಗೆಹರಿಸುತ್ತಾನೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಹಣ ಸಿಗುತ್ತದೆ. ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸಹಾಯ ದೊರೆಯುತ್ತದೆ ಎಂಬ ಕರಪತ್ರಗಳನ್ನು ಹಂಚಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular