ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಳದಿ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ನೆರವಾಗಲು ಹೊಸ ನಮ್ಮ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಘೋಷಣೆ ಮಾಡಿದೆ. ಮೂರು ನಿಲ್ದಾಣಗಳಿಗೆ ಈ ಬಸ್‌ಗಳು ಸಂಪರ್ಕವನ್ನು ಕಲ್ಪಿಸುತ್ತದೆ.
ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಜಂಟಿಯಾಗಿ ಈ ಹೊಸ ಬಸ್ ಸೇವೆಯನ್ನು ಆರಂಭಿಸಿವೆ. ಈ ಕುರಿತು ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಬಸ್‌ಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ನಮ್ಮ ಮೆಟ್ರೋ ಫೀಡರ್ ಬಸ್‌ಗಳು ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕವನ್ನು ಕಲ್ಪಿಸುತ್ತವೆ. ಬಿಎಂಟಿಸಿ ಬಸ್ ಹೊರಡುವ/ ನಿರ್ಗಮದ ಮಾಹಿತಿ ಇಲ್ಲಿದೆ.
ಬಿಎಂಆರ್‌ಸಿಎಲ್ ವತಿಯಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆ-ಬೊಮ್ಮಸಂದ್ರ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿರುವುದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಮೆಟ್ರೋ ಪ್ರಯಾಣಿಕರಿಗೆ ಸುಗಮವಾದ ಮೊದಲ ಹಾಗೂ ಕೊನೆಯ ಮೈಲು ಸಂಪರ್ಕ ಒದಗಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಜಂಟಿಯಾಗಿ ಕ್ರಮ ಕೈಗೊಂಡಿವೆ.
ಈ ಫೀಡರ್ ಬಸ್ ಸೇವೆಗಳು ಹೊಸ ರಸ್ತೆ, ಸಿಂಗಸಂದ್ರ ಹಾಗೂ ಕುಡ್ಲು ಗೇಟ್ ಮೆಟ್ರೋ ನಿಲ್ದಾಣಗಳನ್ನು ಸುತ್ತಮುತ್ತಲಿನ ವಸತಿ ಮತ್ತು ವಾಣಿಜ್ಯ ಪ್ರದೇಶಗಳೊಂದಿಗೆ ಸಂಪರ್ಕಿಸಲಿದ್ದು, ಜನಸಂದಣಿಯನ್ನು ಕಡಿಮೆ ಮಾಡಲು ಹಾಗೂ ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಲಭ ಮತ್ತು ಅನುಕೂಲಕರವಾಗಿಸಲು ಸಹಾಯ ಮಾಡಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಮೆಟ್ರೋ ಫೀಡರ್ ಬಸ್ ಸೇವೆ ವಿವರ
- ಹೊಸ ರಸ್ತೆ ಮೆಟ್ರೋ ನಿಲ್ದಾಣ-ಹೊಸ ರಸ್ತೆ ಮೆಟ್ರೋ ನಿಲ್ದಾಣ (ರಿಂಗ್ ರೂಟ್) ಸೆಂಟ್ರಲ್ ಜೈಲ್-ನ್ಯಾಷನಲ್ ಪಬ್ಲಿಕ್ ಸ್ಕೂಲ್-ಹರಳೂರು–ಹರಳೂರು ಕ್ರಾಸ್-ಆಗರ– ಪರಂಗಿಪಾಳ್ಯ-ಸೋಮಸುಂದರಪಾಳ್ಯ-ಕುಡ್ಲು ಗೇಟ್-ಸಿಂಗಸಂದ್ರ
- ಹೊಸ ರಸ್ತೆ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ. 06:00, 07:00, 08:15, 08:45, 09:15, 09:30, 10:00, 10:30, 11:00, 11:30, 12:00, 12:40, 13:10, 14:30, 15:00, 15:30, 16:00, 16:20, 16:50, 17:10, 17:30, 18:00, 19:10, 20:20, 21:40.
- ಹೊಸ ರಸ್ತೆ ಮೆಟ್ರೋ ನಿಲ್ದಾಣ-ಹೊಸ ರಸ್ತೆ ಮೆಟ್ರೋ ನಿಲ್ದಾಣ (ರಿಂಗ್ ರೂಟ್) ಸಿಂಗಸಂದ್ರ-ಕುಡ್ಲು ಗೇಟ್-ಸೋಮಸುಂದರಪಾಳ್ಯ-ಪರಂಗಿಪಾಳ್ಯ-ಆಗರ- ಬೆಳ್ಳಂದೂರು ಗೇಟ್/ ಹರಳೂರು ಕ್ರಾಸ್-ಹರಳೂರು-ನ್ಯಾಷನಲ್ ಪಬ್ಲಿಕ್ ಸ್ಕೂಲ್ – ಸೆಂಟ್ರಲ್ ಜೈಲ್
- ಹೊಸ ರಸ್ತೆ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ. 06:15, 07:15, 08:30, 09:00, 09:30, 09:45, 10:15, 10:45, 11:15, 11:45, 12:15, 12:55, 13:25, 14:05, 14:35, 15:10, 15:30, 15:55, 16:25, 16:45, 17:10, 17:30, 18:45, 19:55, 21:20.
- ಹೊಸ ರಸ್ತೆ ಮೆಟ್ರೋ ನಿಲ್ದಾಣ-ಕಾರ್ಮೆಲರಾಮ್ ಬಸ್ ನಿಲ್ದಾಣ. ಸೆಂಟ್ರಲ್ ಜೈಲ್ – ದೊಡ್ಡಮಾರ-ಚಿಕ್ಕನಾಯಕನಹಳ್ಳಿ–ದೊಡ್ಡಕನ್ನಳ್ಳಿ.
- ಹೊಸ ರಸ್ತೆ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ. 06:00, 06:35, 07:10, 07:55, 08:35, 09:15, 09:55, 10:45, 11:20, 11:55, 12:30, 14:30, 15:05, 15:40, 16:25, 17:00, 17:35, 18:15, 18:55, 19:35, 20:10, 21:00.
- ಕಾರ್ಮೆಲರಾಮ್ ಬಸ್ ನಿಲ್ದಾಣದಿಂದ ಹೊರಡುವ ಸಮಯ. 06:00, 06:35, 07:10, 07:55, 08:35, 09:15, 09:55, 10:45, 11:20, 11:55, 13:55, 14:30, 15:05, 15:40, 16:25, 17:00, 17:35, 18:15, 18:55, 19:35, 20:10, 21:00.
ಮೆಟ್ರೋ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಿಗೆ ಸುಲಭ ಮತ್ತು ನಿರಂತರ ಸಂಪರ್ಕಕ್ಕಾಗಿ ಈ ಫೀಡರ್ ಬಸ್ ಸೇವೆಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

