ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಮೂಲಕ ರೈತರಿಗೆ ಬಡ್ಡಿಯಿಲ್ಲದೆ ಸಾಲ ನೀಡಲಾಗುತ್ತಿದೆ ಎಂಬ ಸಂದೇಶವು ನಿಮಗೂ ಬಂದಿದ್ದರೆ ಈ ಸುದ್ದಿ ಓದಿ. ಅಂದಹಾಗೆ, ನೀವು ಜಾಗರೂಕರಾಗಿರುವುದು ಮುಖ್ಯ. ಈ ಬಗ್ಗೆ ಸಾಮಾನ್ಯ ಜನರಿಗೆ ಪಿಐಬಿಯಿಂದ ಸರಿಯಾದ ಮಾಹಿತಿ ನೀಡಲಾಗಿದೆ.
3 ಲಕ್ಷದವರೆಗಿನ ಸಾಲದ ಮೇಲೆ ಶೇ. 7 ರಷ್ಟು ಬಡ್ಡಿ ನೀಡಲಾಗುವುದು ಎಂಬ ವೈರಲ್ ಸಂದೇಶವನ್ನು ಬಹಿರಂಗಪಡಿಸಿ, ಸರ್ಕಾರವೇ ಅಧಿಕೃತ ಟ್ವಿಟರ್ ಖಾತೆ ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಟ್ವೀಟ್ ಮಾಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸರ್ಕಾರ ತಿಳಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಅಡಿಯಲ್ಲಿ ನೀಡಲಾದ 3 ಲಕ್ಷದವರೆಗಿನ ಸಾಲಕ್ಕೆ ಶೇ. 7 ಬಡ್ಡಿ ದರವಿದೆ. ಇದರಲ್ಲಿ ಶೇ 3ರಷ್ಟು ರಿಯಾಯಿತಿ ನೀಡುವ ಅವಕಾಶವೂ ಇದೆ.
ಏಪ್ರಿಲ್ 1 ರಿಂದ ಕೆಸಿಸಿ ಮೇಲಿನ ಬಡ್ಡಿದರ ಶೂನ್ಯ ಎಂದು ಹೇಳಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಸಂದೇಶ ಹೆಚ್ಚು ವೈರಲ್ ಆಗಿದೆ. ಇದರಲ್ಲಿ ಏಪ್ರಿಲ್ 1, 2022 ರಿಂದ 3 ಲಕ್ಷದವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಯಾವುದೇ ಬಡ್ಡಿ ಇರುವುದಿಲ್ಲ ಎಂದು ಪತ್ರಿಕೆಯೊಂದರ ತಣುಕು ಹಾಕಿ ಹೇಳಲಾಗುತ್ತಿದೆ.
ಈ ಬಗ್ಗೆ ಪಿಐಬಿ ಟ್ವೀಟ್ ಮಾಡಿದ್ದು, ಇದು ಸಂಪೂರ್ಣವಾಗಿ ನಕಲಿ ಎಂದು ಹೇಳಿದೆ. ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ. ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ(ಕೆಸಿಸಿ) ಶೇಕಡ 7 ರಷ್ಟು ಬಡ್ಡಿ ಪಾವತಿಸಬೇಕು ಎಂದು ತಿಳಿಸಲಾಗಿದೆ.