alex Certify ಎಲ್ಐಸಿ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಶೇ.16 ವೇತನ ಹೆಚ್ಚಳ, ವಾರಕ್ಕೆರಡು ರಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಐಸಿ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಶೇ.16 ವೇತನ ಹೆಚ್ಚಳ, ವಾರಕ್ಕೆರಡು ರಜೆ

ಭಾರತೀಯ ಜೀವ ವಿಮಾ ನಿಗಮದ ನೌಕರರಿಗೆ ಮಹತ್ವದ ಗುಡ್ ನ್ಯೂಸ್ ಸಿಕ್ಕಿದೆ. ಇತರ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳಿಗಿಂತ ಭಿನ್ನವಾಗಿ ಇವರು ಪ್ರತಿ ಶನಿವಾರವನ್ನೂ ಸಹ ವಾರದ ರಜೆಯಾಗಿ ಆನಂದಿಸಬಹುದು.

ಇದರೊಟ್ಟಿಗೆ ಹಣಕಾಸು ಸೇವಾ ಇಲಾಖೆ (ಡಿಎಫ್‌ಎಸ್) ಎಲ್ಐಸಿ ನೌಕರರ ವೇತನವನ್ನು ಶೇಕಡ 16ರಷ್ಟು ಪರಿಷ್ಕರಣೆ ಮಾಡಲು ಮುಂದಾಗಿದೆ. ಇದರಿಂದ ಸರಿಸುಮಾರು ಒಂದು ಲಕ್ಷ ನೌಕರರಿಗೆ ಲಾಭವಾಗಲಿದೆ.

ಕೊರೋನಾ ಸೋಂಕು ಸ್ಪೋಟ: ಕುಂಭಮೇಳಕ್ಕೆ ಕಡಿವಾಣ ಹಾಕಲು ಮೋದಿ ಮನವಿ –ಸಾಂಕೇತಿಕ ಆಚರಣೆಗೆ ಸಲಹೆ

2012ರಿಂದೀಚೆಗೆ ವೇತನ ಪರಿಷ್ಕರಣೆ ಆಗಿರಲಿಲ್ಲ ಎಂಬ ಕೂಗಿತ್ತು. ಒಂಬತ್ತು ವರ್ಷಗಳ ಬಳಿಕ ವೇತನ ಪರಿಷ್ಕರಣೆಯಾಗುತ್ತಿರುವುದರಿಂದ ಶೇಕಡಾ 35ರಷ್ಟು ವೇತನ ಹೆಚ್ಚಾಗಬಹುದು ಎಂದು ಅಲ್ಲಿನ‌ ನೌಕರರು ನಿರೀಕ್ಷಿಸಿದ್ದರು.

ಇದಿಷ್ಟೇ ಅಲ್ಲದೆ ವಿವಿಧ ಭತ್ಯೆಗಳ ಪರಿಷ್ಕರಣೆಗೆ ಸಹ ಒಪ್ಪಿಗೆ ಸಿಕ್ಕಿದೆ. ಇದು ನೌಕರರಿಗೆ ಸಮಾಧಾನ ತಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...