
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಮದ್ಯ ಮಾರಾಟಗಾರರಿಗೆ ಎರಡು ತಿಂಗಳ ಸನ್ನದು ಶುಲ್ಕದಲ್ಲಿ ವಿನಾಯಿತಿ ಕೊಡಬೇಕು. ಸಾಧ್ಯವಾಗದಿದ್ದರೆ ಹೆಚ್ಚುವರಿ ಅಬಕಾರಿ ಶುಲ್ಕದಲ್ಲಿ ಶೇಕಡ 15 ರಷ್ಟು ಕಡಿಮೆ ಮಾಡಬೇಕೆಂದು ರಾಜ್ಯ ವೈನ್ ವರ್ತಕರ ಒಕ್ಕೂಟದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಸಿಎಂ ಭೇಟಿ ಮಾಡಿದ ರಾಜ್ಯ ವೈನ್ ವರ್ತಕರ ಒಕ್ಕೂಟದ ನಿಯೋಗ, ಹೆಚ್ಚುವರಿ ಅಬಕಾರಿ ಶುಲ್ಕದಲ್ಲಿ ಶೇಕಡ 15 ರಷ್ಟು ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಬಾರ್ ಗಳಲ್ಲಿ ಮದ್ಯದೊಂದಿಗೆ ಆಹಾರ ಸೇವನೆಗೆ ಅವಕಾಶ ನೀಡಬೇಕು. ಗರಿಷ್ಠ ಚಿಲ್ಲರೆ ದರಗಳಲ್ಲಿ ಬಿಯರ್, ವಿಸ್ಕಿ, ರಮ್ ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಕೋರಲಾಗಿದೆ.