ಕೊರೊನಾ ಹಿನ್ನೆಲೆ ವಿವಿಧ ವೃತ್ತಿಯವರು ತಮ್ಮ ವೃತ್ತಿಯನ್ನು ಮುಂದುವರಿಸಲು ಪರದಾಡುತ್ತಿದ್ದಾರೆ. ಇನ್ನು ಕೆಲವರು ಕಾಲಕ್ಕೆ ತಕ್ಕಂತೆ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಈ ಸಂದರ್ಭಕ್ಕೆ ತಕ್ಕಂತೆ ಅವಕಾಶವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ಬಿಹಾರದ ಮಧುಬನಿ ಕಲಾವಿದ ರಿಮಂತ್ ಕುಮಾರ್ ಮಿಶ್ರಾ ಸಿದ್ಧಪಡಿಸಿದ ಮಾಸ್ಕ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಮಾಸ್ಕ್ ಮೇಲೆ ಮಧುಬನಿ ಚಿತ್ರಕಲೆಯನ್ನು ರಚಿಸಿ ಅವರು ಮಾರಾಟ ಮಾಡಲು ನಿರ್ಧರಿಸಿದಾಗ ಯಾರು ಅಷ್ಟೊಂದು ಆಸಕ್ತಿ ತೋರಿರಲಿಲ್ಲ, ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಪ್ರಕಟವಾಗುತ್ತಿದ್ದಂತೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಮಿಶ್ರಾ ಅವರು ಸಿದ್ಧಪಡಿಸುವ ಮೂರು ಲೇಯರ್ ಕಾಟನ್ ಮಾಸ್ಕ್ ಗೆ 50 ರೂ. ಆಗಿದ್ದು ಇದನ್ನು ಕೊರಿಯರ್ ಮೂಲಕ ಕಳಿಸಿಕೊಡುತ್ತಿದ್ದಾರೆ. ಲೇಖಕರಾದ ಅದ್ವೈತ ಕಲಾ ಅವರು ಟ್ವಿಟರ್ನಲ್ಲಿ ಮಧುಬನಿ ಕಲೆಯ ಮಾಸ್ಕ್ ವಿಷಯ ಪ್ರಕಟಿಸುತ್ತಿದ್ದಂತೆ ನೂರಾರು ಮಂದಿ ಕಲಾವಿದಗೆ ಕರೆ ಮಾಡಿ ಆರ್ಡರ್ ನೀಡಿದ್ದಾರೆ.
https://twitter.com/AdvaitaKala/status/1279651835658321920?ref_src=twsrc%5Etfw%7Ctwcamp%5Etweetembed%7Ctwterm%5E1279651835658321920%7Ctwgr%5E&ref_url=https%3A%2F%2Fwww.indiatoday.in%2Ftrending-news%2Fstory%2Fbihar-madhubani-artist-s-handpainted-masks-go-viral-people-rush-to-buy-his-work-1698564-2020-07-09