![Air India Announces Additional Flights to London From January 1, 2021 Under Air Bubble Agreement](https://images.news18.com/ibnlive/uploads/2020/09/1600358417_air-india-flight-diverted.jpg)
ಏರ್ ಬಬಲ್ ಒಪ್ಪಂದದ ಅಡಿಯಲ್ಲಿ ಏರ್ ಇಂಡಿಯಾ ಭಾರತ ಹಾಗೂ ಯುಕೆ ನಡುವೆ ಹೆಚ್ಚುವರಿ ವಿಮಾನವನ್ನ ಬಿಡಲು ನಿರ್ಧರಿಸಿದೆ. ಲಂಡನ್ಗೆ ಈ ವಿಮಾನಗಳು ದೆಹಲಿ, ಮುಂಬೈ, ಅಹಮದಾಬಾದ್, ಬೆಂಗಳೂರು, ಅಮೃತ್ ಸರ, ಕೊಲ್ಕತ್ತಾ , ಕೊಚ್ಚಿ ಹಾಗೂ ಗೋವಾ ಮೂಲಕ ಹೊರಡಲಿವೆ, 2021ರ ಜನವರಿ 1ರಿಂದ ಮಾರ್ಚ್ 27ರವರೆಗೆ ಏರ್ ಲೈನ್ ಅಧಿಕೃತ ವೆಬ್ಸೈಟ್ ಖಾತೆ ಮೂಲಕ ಟಿಕೆಟ್ ಕಾದಿರಿಸಬಹುದಾಗಿದೆ.
ಇತ್ತೀಚೆಗಷ್ಟೇ ಏರ್ ಬಬಲ್ ಒಪ್ಪಂದದ ವಿಚಾರವಾಗಿ ಮಾತನಾಡಿದ್ದ ಕೇಂದ್ರ ಸಚಿವ ಪುರಿ, ಭಾರತ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ ಸೇರಿದಂತೆ ವಿಶ್ವದ 17ರಾಷ್ಟ್ರಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೇ ಇಟಲಿ , ಬಾಂಗ್ಲಾ, ಖಜಗಿಸ್ತಾನದ ಜೊತೆ ಒಪ್ಪಂದದ ಸಂಬಂಧ ಚರ್ಚೆ ಮುಂದುವರಿದಿದೆ ಅಂತಾ ಹೇಳಿದ್ದರು.