ನವದೆಹಲಿ: ಇಂದು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ಮೊದಲ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ಯಾಬ್ ಮೂಲಕ ಆಯವ್ಯಯ ಮಂಡಿಸಲಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸಾಂಪ್ರದಾಯಿಕ ಸ್ವದೇಶಿ ಬಹಿ ಖಾತಾ ಬದಲಿಗೆ ಟ್ಯಾಬ್ ಬಳಕೆ ಮಾಡುತ್ತಿದ್ದು, ಮೇಡ್ ಇನ್ ಇಂಡಿಯಾ ಟ್ಯಾಬ್ ನಲ್ಲಿ ಬಜೆಟ್ ಪ್ರತಿಯಿದ್ದು, ಅದನ್ನು ನಿರ್ಮಲಾ ಸೀತಾರಾಮನ್ ಓದಲಿದ್ದಾರೆ.
ಇಂದಿರಾ ಗಾಂಧಿ ಬಳಿಕ ಬಜೆಟ್ ಮಂಡಿಸಿದ ಮತ್ತೊಬ್ಬ ಮಹಿಳೆ ನಿರ್ಮಲಾ ಸೀತಾರಾಮನ್
ಹಲವು ವರ್ಷಗಳಿಂದ ಬ್ರಿಟಿಷ್ ಸಂಪ್ರದಾಯದಂತೆ ಬಜೆಟ್ ಪ್ರತಿಗಳನ್ನು ಬ್ರೀಫ್ ಕೇಸ್ ನಲ್ಲಿ ತರಲಾಗುತ್ತಿತ್ತು. ಆದರೆ 2019ರಲ್ಲಿ ಇದಕ್ಕೆ ಬ್ರೇಕ್ ಹಾಕಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬ್ರೀಫ್ ಕೇಸ್ ಬದಲು ಸ್ವದೇಶಿ ಬಹಿ ಖಾತಾ ತರಲು ಆರಂಭಿಸಿದರು. ಈ ಬಾರಿ ಕೊರೊನಾ ಕಾರಣದಿಂದಾಗಿ ಬಹಿ ಖಾತಾ ಬದಲು ಟ್ಯಾಬ್ ಮೂಲಕ ಬಜೆಟ್ ಮಂಡಿಸಲಿದ್ದಾರೆ.
ಒಟ್ಟಾರೆ ಈ ಬಾರಿ ಡಿಜಿಟಲ್ ರೂಪದಲ್ಲಿ ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ದೇಶದ ಚಿತ್ತ ಬಜೆಟ್ ನತ್ತ ನೆಟ್ಟಿದೆ. ಯಾವ ಯಾವ ಕ್ಷೇತ್ರಗಳಿಗೆ ಬಜೆಟ್ ನಲ್ಲಿ ಆದ್ಯತೆ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.