ನೀವು ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಗ್ರಾಹಕರಾ…? ಹಾಗಾದ್ರೆ ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ನೀವು ಈವರೆಗೆ ಪ್ಯಾನ್, ಡೇಟ್ ಆಫ್ ಬರ್ತ್ಗಳನ್ನು ನಿಮ್ಮ ಖಾತೆಗೆ ಅಟ್ಯಾಚ್ ಮಾಡಿಸದೇ ಇದ್ದರೆ ಕೂಡಲೇ ಈ ಕೆಲಸ ಮಾಡಿ.
ಇಂತಹದೊಂದು ಮಹತ್ವದ ಸಂದೇಶವನ್ನ ಬ್ಯಾಂಕ್ ಆಫ್ ಬರೋಡ ತನ್ನ ಗ್ರಾಹಕರಿಗೆ ನೀಡಿದೆ. ಈ ಅಪ್ಡೇಟ್ ಗಳನ್ನು ನೀಡದೇ ಇದ್ದರೆ ಅಂತಹ ಗ್ರಾಹಕರ ಖಾತೆಯನ್ನು ಫ್ರೀಜ್ ಮಾಡಲಾಗುವುದು ಎಂದೂ ಎಚ್ಚರಿಕೆ ನೀಡಿದೆ ಬ್ಯಾಂಕ್.
ಗ್ರಾಹಕರು ತಮ್ಮ ಹೋಮ್ ಬ್ರಾಂಚ್ಗೆ ಹೋಗಿ ಡೇಟ್ ಆಫ್ ಬರ್ತ್ ಇರುವ ವೋಟರ್ ಐಡಿ/ಆಧಾರ್ ಸಂಖ್ಯೆ/ಪಾಸ್ಪೋರ್ಟ್ ಸೇರಿದಂತೆ ಯಾವುದಾದರು ಫೋಟೋ ಕಾಪಿ ಸಲ್ಲಿಸಬೇಕು.