ಐಪಿಎಲ್ ಪಂದ್ಯ ರದ್ದಾಗುತ್ತೆ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಹೊಸ ಉತ್ಸಾಹ ಬಂದಿದೆ. ಸೆಪ್ಟೆಂಬರ್ 19ರಿಂದಲೇ ಐಪಿಎಲ್ ಪಂದ್ಯಗಳು ಶುರುವಾಗಲಿವೆ. ವಿಶ್ವದ ಅತಿದೊಡ್ಡ ಟಿ 20 ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಐಪಿಎಲ್ ಯುಎಇಯ ಮೂರು ಸ್ಥಳಗಳಲ್ಲಿ ನಡೆಯಲಿದೆ. ಅಬುಧಾಬಿ, ದುಬೈ ಮತ್ತು ಶಾರ್ಜನ್‌ನಲ್ಲಿ ನಡೆಯಲಿದೆ.
ಕೊರೊನಾ, ಭಾರತ-ಚೀನಾ ನಡುವಿನ ಉದ್ವಿಗ್ನತೆ ಮಧ್ಯೆಯೇ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಚೀನಾ ಕಂಪನಿಯೊಂದಿಗೆ ಒಪ್ಪಂದವನ್ನು ಉಳಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ವಿವೊ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದೆ.
ಪೇಟಿಎಂ, ಡ್ರೀಮ್ 11, ಬೈಜಸ್ ಮತ್ತು ಸ್ವಿಗ್ಗಿಗಳಲ್ಲಿ ಚೀನಾದ ಹೂಡಿಕೆಯಿದೆ. ಭಾರತ ಮತ್ತು ಚೀನಾ ನಡುವಿನ ಪ್ರಸ್ತುತ ಉದ್ವಿಗ್ನತೆಯನ್ನು ಗಮನಿಸಿದರೆ, 10 ಅಂಶಗಳ ಕಾರ್ಯಸೂಚಿಯಲ್ಲಿ ಈ ವಿಷಯವು ಅತ್ಯಂತ ಮುಖ್ಯವಾಗಿತ್ತು. ಬಿಸಿಸಿಐಗೆ ಒಂದು ವರ್ಷದಲ್ಲಿ 440 ಕೋಟಿ ರೂಪಾಯಿಯನ್ನು ಇವುಗಳಿಂದ ಪಡೆಯುತ್ತಿದೆ.
ಕಷ್ಟದ ಸಂದರ್ಭದಲ್ಲಿ ಐಪಿಎಲ್ ಗೆ ಹೊಸದಾಗಿ ಹಣ ಹೂಡಲು ಯಾರೂ ಮುಂದೆ ಬರುವುದಿಲ್ಲ. 400 ಕೋಟಿ ನೀಡಲು ಮತ್ತ್ಯಾವ ಕಂಪನಿಯೂ ಮುಂದೆ ಬರಲಾರದು. ವಿವೋ ಜೊತೆ ಒಪ್ಪಂದ ಮುರಿಯಲು ಸಾಧ್ಯವಿಲ್ಲವೆಂದು ಈ ಹಿಂದೆ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದರು. ಸಭೆಯಲ್ಲೂ ಇದೇ ತೀರ್ಮಾನ ತೆಗೆದುಕೊಳ್ಳಲಾಗಿದೆ.