HomeKarnatakaBIG NEWS: ಕೈ ಕೊಟ್ಟ ಮಳೆ; ಹೆಚ್ಚಿದ ಸಾಲಬಾಧೆ; ನೊಂದ ರೈತ ಮಹಿಳೆ ಆತ್ಮಹತ್ಯೆ

BIG NEWS: ಕೈ ಕೊಟ್ಟ ಮಳೆ; ಹೆಚ್ಚಿದ ಸಾಲಬಾಧೆ; ನೊಂದ ರೈತ ಮಹಿಳೆ ಆತ್ಮಹತ್ಯೆ

ಚಿಕ್ಕಮಗಳೂರು: ಸಾಲಬಾಧೆಗೆ ಬೇಸತ್ತ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರಂಗೇನಹಳ್ಳಿಯ ಗ್ರಾಮದಲ್ಲಿ ನಡೆದಿದೆ.

ಹನುಮಮ್ಮ (75) ಮೃತ ಮಹಿಳೆ. 3 ಎಕರೆ 30 ಗುಂಟೆಯ ಹೊಲದಲ್ಲಿ ಜೋಳ, ರಾಗಿ ಬಿತ್ತನೆ ಮಾಡಿದ್ದರು. ಆದರೆ ಈವರ್ಷ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತಿದ ಬೆಳೆ ನಾಶವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದ ಮಹಿಳೆಗೆ ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದೆ. ಇನ್ನೊಂದೆಡೆ ಸಾಲ ತೀರಿಸುವ ದಾರಿ ಕಾಣದಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಮಹಿಳೆ ದುಡುಕಿನ ನಿರ್ಧರ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular