HomeKarnatakaಪರಿಶಿಷ್ಟ ಜಾತಿ ಸುಳ್ಳು ದಾಖಲಾತಿ ಸೃಷ್ಟಿಸಿದ ಗ್ರಾಪಂ ಸದಸ್ಯೆ, ಸಹಾಯ ಮಾಡಿದ ಮುಖ್ಯ ಶಿಕ್ಷಕನಿಗೆ 7...

ಪರಿಶಿಷ್ಟ ಜಾತಿ ಸುಳ್ಳು ದಾಖಲಾತಿ ಸೃಷ್ಟಿಸಿದ ಗ್ರಾಪಂ ಸದಸ್ಯೆ, ಸಹಾಯ ಮಾಡಿದ ಮುಖ್ಯ ಶಿಕ್ಷಕನಿಗೆ 7 ವರ್ಷ ಜೈಲು ಶಿಕ್ಷೆ

ಹಾವೇರಿ: ಸುಳ್ಳು ದಾಖಲಾತಿ ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಮತ್ತು ಆಕೆಗೆ ನೆರವಾಗಿದ್ದ ಮುಖ್ಯ ಶಿಕ್ಷಕನಿಗೆ 7 ವರ್ಷ ಕಾರಾಗೃಹ ಶಿಕ್ಷೆ, 37 ಸಾವಿರ ರೂಪಾಯಿ ದಂಡ ವಿಧಿಸಿ ಹಾವೇರಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2010ರಲ್ಲಿ ನಡೆದ ಗುತ್ತಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದ ಮುಕ್ತಾಬಾಯಿ ಚುನಾಯಿತರಾಗಿದ್ದರು. ಮುಖ್ಯ ಶಿಕ್ಷಕ ಮಾರುತಿ ಹನುಮಂತಪ್ಪ ಅವರಿಗೆ ನೆರವಾಗಿದ್ದರು. ಮುಕ್ತಾಬಾಯಿ ಪ್ರವರ್ಗ 1 ಗೊಂದಳಿ ಜಾತಿಗೆ ಸೇರಿದ್ದರು. ಕಳಕಪ್ಪ ತಳವಾರ, ಮಾರುತಿ ಹನುಮಂತಪ್ಪ ಅವರ ಸಹಾಯ ಪಡೆದು ಸುಳ್ಳು ವ್ಯಾಸಂಗ ಪ್ರಮಾಣ ಪತ್ರ ಸೇರಿ ಇತರೆ ದಾಖಲಾತಿ ಸೃಷ್ಟಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅಂದಿನ ತಹಶೀಲ್ದಾರ್ ಮುಕ್ತಾಬಾಯಿ ಗ್ರಾಪಂ ಸದಸ್ಯತ್ವ ರದ್ದು ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 37 ಸಾವಿರ ರೂ. ದಂಡ ವಿಧಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular