ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ಯುಪಿಎಸ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಫೇಸ್ ಆಥೆಂಟಿಕೇಷನ್(ಮುಖ ಗುರುತಿಸುವಿಕೆ) ಪ್ರಕ್ರಿಯೆ ಕಡ್ಡಾಯಗೊಳಿಸಲಾಗಿದೆ.
ನಿರ್ದಿಷ್ಟ ಸೇವೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ ಲೋಕಸೇವಾ ಆಯೋಗ ಕಠಿಣ ಅರ್ಹತಾ ನಿಯಮಗಳನ್ನು ಪರಿಚಯಿಸಿದೆ. ಯುಪಿಎಸ್‌ಸಿ ಪರೀಕ್ಷೆ ಅರ್ಹತಾ ನಿಯಮಗಳ ಬದಲಾವಣೆ ಮಾಡಲಾಗಿದೆ. 2026ರ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಗುರುವಾರ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಈ ವರ್ಷದ ನೇಮಕಾತಿಯಲ್ಲಿ 933 ಹುದ್ದೆಗಳನ್ನು ಆಯೋಗ ಪ್ರಕಟಿಸಿದ್ದು, ಇದರಲ್ಲಿ 33 ಹುದ್ದೆಗಳು ಬೆಂಚ್ಮಾರ್ಕ್ ಅಂಗವಿಕಲರಿಗೆ ಮೀಸಲಾಗಿಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಿಲಿಮ್ಸ್ ಮೇ 24 ರಂದು ನಡೆಯಲಿದ್ದು, ಅಭ್ಯರ್ಥಿಗಳು ಮುಖ ದೃಢೀಕರಣಕ್ಕಾಗಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕೆಮದು ಹೇಳಲಾಗಿದೆ.

