‘ಪ್ರಧಾನಮಂತ್ರಿ ಆವಾಸ್ ಯೋಜನೆ’ಯಡಿ ಸಮೀಕ್ಷೆ ನಡೆಸಲು ಕಾಲಾವಕಾಶ ವಿಸ್ತರಣೆ

ಬೆಂಗಳೂರು : ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿ ಅರ್ಹ ವಸತಿರಹಿತರ ಹಾಗೂ ನಿವೇಶನರಹಿತರ ಸಮೀಕ್ಷೆ ನಡೆಸಲು ದಿನಾಂಕ 30.04.2025 ರವರೆಗೆ ಕಾಲಾವಕಾಶ ನೀಡಲಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ರಡಿ ಅರ್ಹ ವಸತಿರಹಿತರ ಹಾಗೂ ನಿವೇಶನರಹಿತರ ಸಮೀಕ್ಷೆ ನಡೆಸಲು ಕಾಲಾವಕಾಶ ನೀಡಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ರಡಿ ಅರ್ಹ ವಸತಿ ರಹಿತರ ಹಾಗೂ ನಿವೇಶನರಹಿತರ ಸಮೀಕ್ಷೆ ನಡೆಸಲು ದಿನಾಂಕ 31.03.2025 ವರೆಗೆ ಕಾಲಾವಕಾಶ ನೀಡಿದ್ದು, ಪ್ರಸ್ತುತ ಉಲ್ಲೇಖ ಪತ್ರದಲ್ಲಿ ಸಮೀಕ್ಷೆ ಕಾರ್ಯವನ್ನು ದಿನಾಂಕ 30.04.2025 ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿರುತ್ತದೆ.

ನಿಗಮವು ದಿನಾಂಕ 25.03.2025ರ ಪತ್ರದಲ್ಲಿ ಸಮೀಕ್ಷೆ ಕಾರ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮ ಪಂಚಯಾತ್ / ಗ್ರಾಮ ಮಟ್ಟದಲ್ಲಿ ಜಾಗೃತಿ ಅಭಿಯಾನ (IEC Activity) ಕೈಗೊಂಡು, ಶೇಕಡಾ 100 ರಷ್ಟು ಅರ್ಹ ವಸತಿರಹಿತರ ಕುಟುಂಬಗಳ ಸಮೀಕ್ಷೆ ನಡೆಸಲು ಈಗಾಗಲೇ ತಿಳಿಸಲಾಗಿದೆ.

ಸದರಿ ಸಮೀಕ್ಷೆಯಲ್ಲಿ ಅರ್ಹ ವಸತಿರಹಿತರು ಕೈಬಿಟ್ಟು ಹೋಗಬಾರದೆಂಬ ಕಾರಣದಿಂದ ಸಮೀಕ್ಷೆ ನಡೆಸಲು ದಿನಾಂಕ 30.4.2025 ರವರೆಗೆ ಗಡುವು ವಿಸ್ತರಿಸಿರು ವುದರಿಂದ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಾಗೃತಿ ಅಭಿಯಾನ (IEC Activity) ಕೈಗೊಂಡು ಯಶಸ್ವಿಯಾಗಿ ಸಮೀಕ್ಷೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಕ್ತ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಕೋರಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read