HomeLatest NewsBIG NEWS : ಪ್ರತಿಯೊಬ್ಬರೂ ಯೋಗದ ಜ್ಞಾನವನ್ನು ಅಳವಡಿಸಿಕೊಳ್ಳಿ : ಕೇಂದ್ರ ಸಚಿವ H.D ಕುಮಾರಸ್ವಾಮಿ...

BIG NEWS : ಪ್ರತಿಯೊಬ್ಬರೂ ಯೋಗದ ಜ್ಞಾನವನ್ನು ಅಳವಡಿಸಿಕೊಳ್ಳಿ : ಕೇಂದ್ರ ಸಚಿವ H.D ಕುಮಾರಸ್ವಾಮಿ ಕರೆ

ಬೆಂಗಳೂರು : ಪ್ರತಿಯೊಬ್ಬರೂ ಯೋಗದ ಜ್ಞಾನವನ್ನು ಅಳವಡಿಸಿಕೊಳ್ಳಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಎಲ್ಲರಿಗೂ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಪ್ರತಿಯೊಬ್ಬ ನಾಗರಿಕನು ದೈಹಿಕ ಚೈತನ್ಯ, ಮಾನಸಿಕ ಸ್ಪಷ್ಟತೆ ಮತ್ತು ಶಾಂತಿಗೆ ಶಾಶ್ವತ ಮಾರ್ಗವಾದ ಯೋಗದ ಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ. ಭಾರತೀಯ ಪ್ರಾಚೀನ ಪರಂಪರೆಯಾದ ಯೋಗವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಯೋಗವು ಯೋಗಕ್ಷೇಮ, ಸಾಮರಸ್ಯ ಮತ್ತು ಸಮಗ್ರ, ಸಶಕ್ತ, ಸದೃಢ ಜೀವನದ ಶಕ್ತಿಯಾಗಿದೆ. ನಮ್ಮೆಲ್ಲರ ಆರೋಗ್ಯಕರ ಜೀವನಕ್ಕೆ ಹಾಗೂ ಸ್ವಾಸ್ತ್ಯ ಭಾರತ ನಿರ್ಮಾಣಕ್ಕಾಗಿ ಯೋಗಾಭ್ಯಾಸವನ್ನು ದೈನಂದಿನ ಜೀವನಶೈಲಿಯನ್ನಾಗಿ ರೂಢಿಸಿಕೊಳ್ಳೋಣ. ನಾನು, ತಮಿಳುನಾಡಿನ ಸೇಲಂ ಉಕ್ಕು ಸ್ಥಾವರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular