HomeInternationalಶಾಲೆಯ ಕೊಠಡಿಯಲ್ಲಿ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಹಾವು ಅಲ್ಲಿಯೇ ಪತ್ತೆ!

ಶಾಲೆಯ ಕೊಠಡಿಯಲ್ಲಿ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಹಾವು ಅಲ್ಲಿಯೇ ಪತ್ತೆ!

ಶಾಲೆಯಲ್ಲಿ ನಾಪತ್ತೆಯಾಗಿದ್ದ ಹಾವೊಂದು ಮೂರು ತಿಂಗಳ ಬಳಿಕ ಪತ್ತೆಯಾಗಿದೆ. ಅಮೆರಿಕದ ಲೂಯಿಸ್‌ವಿಲ್ಲೆಯಲ್ಲಿರುವ ವಾಲ್ಡೆನ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹಾವು ನಿರುಪದ್ರವಿಯಾಗಿದ್ದರಿಂದ ಯಾವುದೇ ಸಮಸ್ಯೆ ತಂದೊಡ್ಡಲಿಲ್ಲ.

ವಾಲ್ಡೆನ್ ಶಾಲೆಯು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಾವು ಸಿಕ್ಕಿರುವ ಬಗ್ಗೆ ಉಲ್ಲೇಖಿಸಿದೆ. “ಸುಮಾರು 3 ತಿಂಗಳ ನಂತರ, ಮಿಸ್ಟರ್ ಹಾಪ್ಟ್‌ನ 5 ನೇ-6 ನೇ ತರಗತಿಯ ವಿಜ್ಞಾನ ಕೊಠಡಿಯಿಂದ ತಪ್ಪಿಸಿಕೊಂಡಿತ್ತು. ಈಗ ಅದು ಸಿಕ್ಕಿದೆ ಎಂದು ಹೇಳಲು ರೋಮಾಂಚನವಾಗುತ್ತಿದೆ. ಸೈನ್ಸ್ ರೂಮ್ ಸಿಂಕ್ ಅಡಿಯಲ್ಲಿ ಇದು ಸಿಕ್ಕಿದೆ. ಇದನ್ನು ಕಂಡುಹಿಡಿದ 6ನೇ ತರಗತಿಯ ಆಸ್ಪೆನ್ ಡಬ್ಲ್ಯೂ.ಗೆ ಧನ್ಯವಾದಗಳು ಎಂದು ಅದರಲ್ಲಿ ಬರೆಯಲಾಗಿದ್ದು, ಹಾವನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ಕಾರ್ನ್ ಹಾವಾಗಿದ್ದು ನಿರುದ್ರವಿಯಾಗಿದೆ. ಶಾಂತ ಸ್ವಭಾವದಿಂದಾಗಿ ಕೆಲವರು ಇದನ್ನು ಸಾಕುತ್ತಾರೆ ಕೂಡ. ಈ ಹಾವುಗಳು ಸ್ವಾಭಾವಿಕವಾಗಿ ಒಂಟಿಯಾಗಿ ವಾಸಿಸುತ್ತವೆ. ಇವು ಯಾರಿಗೂ ಹಾನಿ ಮಾಡುವುದಿಲ್ಲ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular