ಬಾಲಿವುಡ್ನ ಖಾತ್ಯ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರು ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರೊಂದಿಗಿನ ಬಾಂಧ್ಯವವನ್ನು ನೆನೆದು ನಟಿ ಮಾಧುರಿ ದೀಕ್ಷಿತ್ ಕಂಬನಿ ಮಿಡಿದಿದ್ದಾರೆ.
71 ವರ್ಷದ ಸರೋಜ್ ಅವರು ಜೂನ್ 20ರಂದು ಗುರುನಾನಕ್ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಕಾರ್ಡಿಯಾಕ್ ಅರೆಸ್ಟ್ ಆಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಕಾರಿಯಾಗದೇ ಶುಕ್ರವಾರ ಮೃತಪಟ್ಟರು. ಸರೋಜ್ ಅವರ ನೆಚ್ಚಿನ ಶಿಷ್ಯೆಯಾಗಿದ್ದ ಮಾಧುರಿ ದೀಕ್ಷಿತ್ ಅವರು, ತುಂಬಲಾರದ ನಷ್ಟವೆಂದು ಹೇಳಿದ್ದಾರೆ.
ಟ್ವೀಟರ್ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ದೀಕ್ಷಿತ್, ನನ್ನ ನೆಚ್ಚಿನ ಸ್ನೇಹಿತೆಯಾಗಿದ್ದ ಸರೋಜ್ ಅವರ ನಿಧನ ವೈಯಕ್ತಿಕವಾಗಿ ಹಾಗೂ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ. ಇಡೀ ವಿಶ್ವ ಅತ್ಯುತ್ತಮ ಕಲಾವಿದೆಯನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ. ಮಾಧುರಿ ಅವರ ಈ ಪೋಸ್ಟ್ಗೆ ಅನೇಕರು ತಮ್ಮ ಧ್ವನಿಗೂಡಿಸಿದ್ದಾರೆ.