![Yeh Rishta Kya Kehlata Hai' Stars Appear On-Screen Wearing Face ...](https://images.news18.com/ibnlive/uploads/2020/07/1594784165_untitled-design-2020-07-15t090251.946.png)
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದರ ಪ್ರಭಾವ ಕಿರುತೆರೆ ಮೇಲೂ ಬೀರಿದೆ. ಜನಪ್ರಿಯ ಕಿರುತೆರೆ ಧಾರಾವಾಹಿ ʼಯೇ ರಿಷ್ತಾ ಕ್ಯಾ ಕೆಹಲ್ತಾ ಹೈʼದ ಒಂದು ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರ ಬಗ್ಗೆ ರಂಗು ರಂಗಿನ ಚರ್ಚೆ ನಡೆಯುತ್ತಿದೆ.
ಧಾರವಾಹಿಯ ವಿಡಿಯೋ ತುಣುಕಿನಲ್ಲಿ ಕಲಾವಿದರು ಫೇಸ್ ಮಾಸ್ಕ್ ಹಾಗೂ ಶೀಲ್ಡ್ ಧರಿಸಿರುವುದನ್ನು ಕಾಣಬಹುದಾಗಿದೆ. ಈ ಮೂಲಕ ಕಲಾವಿದರನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ಅಭಿಮಾನಿಗಳು ಗಮನಿಸಿದ್ದು, ಬಗೆಬಗೆಯಾಗಿ ವರ್ಣಿಸುತ್ತಿದ್ದಾರೆ.
ಕೊರೋನಾ ಲಾಕ್ ಡೌನ್ ಸಡಿಲಿಕೆ ಬಳಿಕ ಮಾರ್ಗಸೂಚಿಯ ಅನುಸಾರ ಉದ್ದಿಮೆ, ವ್ಯವಹಾರ ಆರಂಭಗೊಂಡಿದ್ದು, ಟಿವಿ ಧಾರಾವಾಹಿಗಳ ಚಿತ್ರೀಕರಣವೂ ಶುರುವಾಯಿತು. ಈ ಸಂದರ್ಭದಲ್ಲಿ ಧಾರಾವಾಹಿಯ ಪಾತ್ರ ವರ್ಗದವರು ಸುರಕ್ಷತಾ ಮುನ್ನೆಚ್ಚರಿಕೆ ಅನುಸರಿಸುತ್ತಿರುವುದು ಸಾಮಾಜಿಕ ಮಾಧ್ಯಮದ ಗಮನ ಸೆಳೆದಿದೆ. ಅಲ್ಲದೆ ಕಥಾವಸ್ತುವಿನಲ್ಲಿ ಸಹ ಸುರಕ್ಷತಾ ಕ್ರಮಗಳ ವಿಷಯಗಳು ಪ್ರಸ್ತಾಪವಾಗುತ್ತಿರುವುದು ವಿಶೇಷವಾಗಿದೆ.
https://www.facebook.com/totalchutzpa/posts/998152653937277
https://twitter.com/abnitohkabfir/status/1282929284248555520?ref_src=twsrc%5Etfw%7Ctwcamp%5Etweetembed%7Ctwterm%5E1282929284248555520%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fyeh-rishta-kya-kehlata-hai-stars-appear-on-screen-wearing-face-mask-and-shield-leaves-internet-amused-2716293.html