‘ಕೆಜಿಎಫ್ 2’ ಬಳಿಕ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಯಾವುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬರ್ತಡೇ ದಿನವೇ ಯಶ್ ಸಿಹಿ ಸುದ್ದಿ ನೀಡಲಿದ್ದಾರೆ ಎನ್ನಲಾಗಿದೆ.
ಯಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಪಿಕ್ಚರ್ ‘ಲೋಡಿಂಗ್’ ಅಪ್ಲೋಡ್ ಮಾಡಿದ್ದು, ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ‘ಕೆಜಿಎಫ್ 2’ ನಂತರ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿತ್ತು.
ಇಷ್ಟು ದಿನ ಸಿಹಿ ಸುದ್ದಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ‘ಲೋಡಿಂಗ್’ ಫೋಟೋ ಅಪ್ಲೋಡ್ ಮಾಡಿದ್ದು, ಜನವರಿ 8 ರಂದು ಯಶ್ ತಮ್ಮ ಹೊಸ ಚಿತ್ರದ ಕುರಿತಾಗಿ ಮಾಹಿತಿ ನೀಡುವ ಸಾಧ್ಯತೆ ಇದೆ.
‘ಕೆಜಿಎಫ್ 2’ ಬಳಿಕ ಭಾರಿ ಗ್ಯಾಪ್ ತೆಗೆದುಕೊಂಡಿದ್ದ ಯಶ್, ನಾನು ಸುಮ್ಮನೆ ಕೂತಿಲ್ಲ ಕೆಲಸ ನಡೆಯುತ್ತಿದೆ ಎಂದು ಹೇಳುತ್ತಿದ್ದರು. ಹೇಳಿಕೆಯಂತೆ ಭಾರೀ ನಿರೀಕ್ಷೆಯ ತಮ್ಮ ಮುಂದಿನ ಚಿತ್ರದ ಕುರಿತಾಗಿ ಯಶ್ ಮಾಹಿತಿ ನೀಡುವ ಸಾಧ್ಯತೆ ಇದೆ.
https://www.facebook.com/TheOfficialYash