
ಬಾರ್ಬಿ ಗೊಂಬೆಯಂತೆ ಕಾಣಲು 60 ಲಕ್ಷ ರೂಪಾಯಿ ಖರ್ಚು ಮಾಡಿರುವ 43 ವರ್ಷ ವಯಸ್ಸಿನ ಅಮೆರಿಕದ ಮಹಿಳೆಯೊಬ್ಬರು ಇದೀಗ ತನ್ನದೇ ತದ್ರೂಪಿನ ಜೀವಗಳನ್ನು ಕ್ಲೋನಿಂಗ್ ಮುಖಾಂತರ ಸೃಷ್ಟಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.
ಬಾರ್ಬಿ ಗೊಂಬೆಯಂತೆ ಕಾಣಲು ತಾನೆಂದೂ ಸರ್ಜರಿ ಮಾಡಿಸಿಕೊಂಡಿಲ್ಲ ಎನ್ನುವ ಮಾರ್ಸೆಲಾ ಇಗ್ಲೇಸಿಯಾಸ್, ಲಾಸ್ ಏಂಜಿಲೀಸ್ ನಿವಾಸಿಯಾಗಿದ್ದು, ಕಾಸ್ಮೆಟಿಕ್ ಪ್ರಕ್ರಿಯೆಗಳಿಗೆಂದೇ 60,000 ಪೌಂಡ್ ವ್ಯಯಿಸಿದ್ದಾರೆ.
ತನ್ನನ್ನು ತಾನು ಕ್ಲೋನ್ ಮಾಡಿಕೊಳ್ಳುವ ಮೂಲಕ ದೇಹಗಳ ಅಂಗಾಂಗಗಳನ್ನು ಅಗತ್ಯವಿದ್ದವರಿಗೆ ದಾನ ಮಾಡಲು ಸಾಧ್ಯವೇ ಎಂದು ನೋಡಲು ಇಚ್ಛಿಸುವುದಾಗಿ ಒಂದು ಮಗುವಿನ ತಾಯಿಯಾಗಿರುವ ಇಗ್ಲೇಸಿಯಾಸ್ ಹೇಳುತ್ತಾರೆ.
ಹೀಗಿದೆ ನೋಡಿ ನಿಮ್ಮ ಇಂದಿನ ರಾಶಿ ಭವಿಷ್ಯ
ಟೋಕಿಯೋ ವಿವಿಯ ಪ್ರಾಧ್ಯಾಪಕ ನಕೌಚಿರಿಂದ ಕ್ಲೋನಿಂಗ್ ಕುರಿತು ಅರಿತ ಮೇಲೆ ಈ ಬಗ್ಗೆ ತನಗೆ ಆಸಕ್ತಿ ಮೂಡಿದ್ದಾಗಿ ಇಗ್ಲೇಸಿಯಾಸ್ ತಿಳಿಸಿದ್ದಾರೆ.