ಕೊರೊನಾ ಮಧ್ಯೆಯೂ ಜನರು ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾರೆ. ನೋವಿನ ಮಧ್ಯೆಯೂ ಜನರು ನಗುವುದನ್ನು ಕಲಿತಿದ್ದಾರೆ. ದೇಶದ ಅನೇಕ ಭಾಗಗಳಲ್ಲಿ ಲಾಕ್ ಡೌನ್ ಇದೆ. ಜನರು ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗುವ ವೇಳೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದಾರೆ. ಮಹಿಳೆಯೊಬ್ಬಳು ಪಿಪಿಇ ಕಿಟ್ ಧರಿಸಿ ಪತಿಯನ್ನು ಸ್ವಾಗತಿಸಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದ ವಿಶೇಷವೆಂದ್ರೆ ಪಿಪಿಇ ಕಿಟ್ ಧರಿಸಿದ ಮಹಿಳೆ ಪತಿ ಮುಂದೆ ಡಾನ್ಸ್ ಮಾಡ್ತಿದ್ದಾಳೆ. ವಿಮಾನ ನಿಲ್ದಾಣದಲ್ಲಿ ಪತ್ನಿ ಡಾನ್ಸ್ ಮಾಡ್ತಿದ್ದಾಳೆ. ಪತಿಯಿಂದ ದೂರವಿದ್ದ ಪತ್ನಿ, ಪತಿ ವಾಪಸ್ ಬರ್ತಿದ್ದಂತೆ ಖುಷಿಗೆ ಡಾನ್ಸ್ ಮಾಡಿದ್ದಾಳೆ ಎಂದು ಅಂದಾಜಿಸಲಾಗ್ತಿದೆ.
ಈ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. 2 ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. ಪತ್ನಿ ಸಂತೋಷಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.
https://www.instagram.com/p/CONhcOsBW5h/?utm_source=ig_embed&utm_campaign=embed_video_watch_again