ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ನ ಕೂಲ್ ಜೋಡಿ . ಇವರಿಬ್ಬರ ಮದುವೆ ನಡೆದಿದ್ದು 1999ರಲ್ಲಿ. ಯಶಸ್ಸಿನ ಉತ್ತುಂಗದಲ್ಲಿರುವಾಗ್ಲೇ ಕಾಜೋಲ್ ಹಸೆಮಣೆ ಏರಿದ್ಯಾಕೆ ಅನ್ನೋ ಪ್ರಶ್ನೆ ಈಗಲೂ ಅಭಿಮಾನಿಗಳಲ್ಲಿದೆ.
ಅದಕ್ಕೆ ಕಾರಣವನ್ನು ಕೂಡ ಕಾಜೋಲ್ ಬಹಿರಂಗಪಡಿಸಿದ್ದಾರೆ. ಅದಾಗ್ಲೇ 8-9 ವರ್ಷಗಳಿಂದ ಚಿತ್ರರಂಗದಲ್ಲಿದ್ದ ಕಾಜೋಲ್ ವರ್ಷಕ್ಕೆ 4-5 ಸಿನಿಮಾಗಳಲ್ಲಿ ನಟಿಸ್ತಾ ಇದ್ರು. ಈ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಳ್ಳಬೇಕು ಅಂದಾಕ್ಷಣ ಅವರಿಗೆ ಹೊಳೆದಿದ್ದು ಮದುವೆ ಆಲೋಚನೆ.
ಮದುವೆ ಆದ್ಮೇಲೆ ವರ್ಷಕ್ಕೆ ಒಂದೇ ಸಿನಿಮಾ ಮಾಡಿಕೊಂಡು, ಆರಾಮಾಗಿ, ಶಾಂತಿಯಿಂದ ಇರಬಹುದು ಅನ್ನೋದು ಅವರ ಲೆಕ್ಕಾಚಾರವಾಗಿತ್ತು. ಅದೇ ರೀತಿ ನಡೆದುಕೊಂಡಿದ್ದಾರೆ. ಮದುವೆ ಆದ್ಮೇಲೆ ಫನಾ, ಯು ಮಿ ಔರ್ ಹಮ್, ಮೈ ನೇಮ್ ಈಸ್ ಖಾನ್, ವಿ ಆರ್ ಫ್ಯಾಮಿಲಿ, ತೂನ್ಪುರ್ ಕಾ ಸೂಪರ್ ಹೀರೋ, ದಿಲ್ ವಾಲೆ ಸೇರಿ ಕೆಲವೇ ಚಿತ್ರಗಳಲ್ಲಿ ಕಾಜೋಲ್ ಅಭಿನಯಿಸಿದ್ದಾರೆ.
ಹಿರಿಯ ದಂಪತಿಯ ಮೋಹಕ ನೃತ್ಯಕ್ಕೆ ಮನಸೋತ ನೆಟ್ಟಿಗರು
ಕಾಜೋಲ್- ದೇವಗನ್ ದಂಪತಿಗೆ ನ್ಯಾಸಾ ಮತ್ತು ಯುಗ್ ಎಂಬ ಇಬ್ಬರು ಮಕ್ಕಳಿದ್ದಾರೆ. ತಾವು ಅಂದುಕೊಂಡಂತೆ ಕಾಜೋಲ್, ಅಜಯ್ ದೇವಗನ್ ಜೊತೆಗೆ ಶಾಂತಿ ಮತ್ತು ನೆಮ್ಮದಿಯ ಬದುಕು ನಡೆಸ್ತಿದ್ದಾರೆ.