ನಿಯಮ ಉಲ್ಲಂಘನೆ ಆರೋಪದನ್ವಯ ಮುಂಬೈನಲ್ಲಿನ ಪಾಲಿ ಹಿಲ್ ಬಂಗ್ಲೆ ತೆರವುಗೊಳಿಸುತ್ತಿದ್ದ ಜಾಗಕ್ಕೆ ನಟಿ ಕಂಗನಾ ರಣಾವತ್ ಆಗಮಿಸಿದ್ದು, ಮಾಸ್ಕ್ ಧರಿಸದೇ ಇದ್ದದ್ದು ವಿವಾದಕ್ಕೆ ಕಾರಣವಾಗಿದೆ.
ದೇಶಾದ್ಯಂತ ಕೊರೊನಾ ಸೋಂಕು ಶರವೇಗದಲ್ಲಿ ಹರಡುತ್ತಿದ್ದು, ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದೆ. ದೇಶದ ಜನರೆಲ್ಲರೂ ಈ ನಿಯಮ ಪಾಲಿಸುತ್ತಿದ್ದಾರೆ.
ಆದರೆ, ಮುಂಬೈಗೆ ಬಂದಿಳಿದ ಕಂಗನಾ ಮಾತ್ರ ಮಾಸ್ಕ್ ಧರಿಸಿರಲಿಲ್ಲ. ಕ್ವಾರಂಟೈನ್ ನಿಯಮಗಳನ್ನೂ ಪಾಲಿಸಲಿಲ್ಲ. ಮುಂಬೈಗೆ ಬಂದ ದಿನವೇ ಸ್ಥಳಕ್ಕೆ ತೆರಳಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ವಿಧಿಸಿರುವ ನಿಯಮಗಳನ್ನು ಪಾಲಿಸಿಲ್ಲ.
ಸೋಂಕಿನ ತೀವ್ರತೆ ಕಡಿಮೆಯಾಗಿಲ್ಲ, ಇದಕ್ಕೆ ಯಾವುದೇ ಔಷಧಿ, ಲಸಿಕೆಗಳನ್ನೂ ಕಂಡುಹಿಡಿದಿಲ್ಲ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಮರೆತಂತಿರುವುದು ಅಪಾಯ. ಕಂಗನಾರ ಈ ವರ್ತನೆಗೆ ಜನಾಕ್ರೋಶ ವ್ಯಕ್ತವಾಗಿದ್ದು, ಜಾಲತಾಣದಲ್ಲಿ ಜರಿದಿದ್ದಾರೆ. ಕಂಗನಾರನ್ನು ಕೋವೀಡಿಯಟ್ ಎಂದು ಕರೆದಿದ್ದಾರೆ.
https://twitter.com/charan_tweetz/status/1304008534556848129?ref_src=twsrc%5Etfw%7Ctwcamp%5Etweetembed%7Ctwterm%5E1304008534556848129%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fwheres-the-mask-kangana-ranaut-acted-like-a-covidiot-on-her-visit-to-her-mumbai-office-2866341.html
https://twitter.com/tejind3r/status/1304007815288164355?ref_src=twsrc%5Etfw%7Ctwcamp%5Etweetembed%7Ctwterm%5E1304007815288164355%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fwheres-the-mask-kangana-ranaut-acted-like-a-covidiot-on-her-visit-to-her-mumbai-office-2866341.html