ಬಾಲಿವುಡ್ ನಟ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ರನ್ನು ಹತ್ತು ವರ್ಷದ ಬಾಲಕನೊಬ್ಬ ಅಚ್ಚರಿಗೊಳಿಸಿದ್ದಾನೆ.
10 ವರ್ಷದ ಆದಿತ್ಯ ಶರ್ಮ ಎಂಬ ಬಾಲಕ ಅಕ್ಷಯ್ ಕುಮಾರ್ ಸ್ಕೆಚ್ ಬರೆದಿದ್ದ. ಅದನ್ನು ಆತನ ತಾಯಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ, ಅಕ್ಷಯ್ ಗೆ ಟ್ಯಾಗ್ ಮಾಡಿದ್ದರು.
ಈ ಸ್ಕೆಚ್ ಪರಿಪೂರ್ಣವಲ್ಲ ಎಂದು ನನಗೆ ತಿಳಿದಿದೆ. ಆದರೆ ಅದನ್ನು ಸಾಧ್ಯವಾದಷ್ಟು ಪ್ರಯತ್ನಿಸಿದ್ದಾನೆ. ನೀವು ನೋಡುತ್ತೀರಿ ಎಂದು ಭಾವಿಸುತ್ತೇನೆ ಸರ್, ಮತ್ತು ನಿಮ್ಮ ಪ್ರತಿಕ್ರಿಯೆ ಕಳುಹಿಸಿ, ಧನ್ಯವಾದ ಎಂದು ಅವರು ಎರಡು ಸಾಲು ಬರೆದಿದ್ದರು.
ಇದನ್ನು ಗಮನಿಸಿದ ಅಕ್ಷಯ್ ಕುಮಾರ್, ಈ ಸ್ಕೆಚ್ ಇಷ್ಟವಾಯಿತು, ಆದಿತ್ಯಗೆ ಧನ್ಯವಾದ ಹೇಳಿ. ಅವರ ಮೊದಲ ಸ್ಕೆಚ್ ಗಾಗಿ ನನ್ನನ್ನು ಆಯ್ಕೆ ಮಾಡಿಕೊಂಡಿರುವುದು ನನಗೆ ವಿಶೇಷ ಗೌರವ ಸಿಕ್ಕಂತಾಗಿದೆ, ಯಾವಾಗಲೂ ನನ್ನ ಪ್ರೀತಿ ಮತ್ತು ಹಾರೈಕೆ ಇರಲಿದೆ ಎಂದು ಅಕ್ಷಯ್ ಕುಮಾರ್ ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಕನ ಸ್ಕೆಚ್ ಮತ್ತು ಅಕ್ಷಯ್ ಕುಮಾರ್ ಪ್ರತಿಕ್ರಿಯೆ ವೈರಲ್ ಆಗಿದ್ದು, ನೆಟ್ಟಿಗರನ್ನು ಖುಷಿಪಡಿಸಿದೆ.