ಕೊರೊನಾ ವೈರಸ್ ಸಂಕಷ್ಟದ ಬಳಿಕ ಮನೆಯಲ್ಲೇ ಇರುವ ಬಾಲಿವುಡ್ ನಟಿ ಲಾರಾ ದತ್ತಾ ತಮ್ಮ ಪತಿ ಮಹೇಶ್ ಭೂಪತಿ ಜೊತೆಗಿನ ಸೆಲ್ಫಿ ಫೋಟೊಗಳನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುವ ಮೂಲಕ ತಮ್ಮ ಈ ವರ್ಷದ ಅನುಭವವನ್ನ ಹಂಚಿಕೊಂಡಿದ್ದಾರೆ.
ಬೆಳಗ್ಗೆ ಎದ್ದೊಡನೆಯೇ ಅದೇ ನೈಟ್ ಪೈಜಾಮಾದಲ್ಲೇ ಹಲವಾರು ಸೆಲ್ಫಿಗಳನ್ನ ಪೋಸ್ಟ್ ಮಾಡಿರುವ ಲಾರಾ ದತ್ತಾ, ಕೊರೊನಾ ವೈರಸ್ನಿಂದಾಗಿ ನನ್ನ ಪತಿಗೆ ನಾನು ನನ್ನ ಕೂದಲಿನ ಆರೈಕೆ ಹೇಗೆ ಮಾಡುತ್ತೇನೆ ಎಂಬ ವಿಚಾರ ಗೊತ್ತಾಗಿದೆ ಅಂತಾ ಫನ್ನಿಯಾಗಿ ಕ್ಯಾಪ್ಶನ್ ನೀಡಿದ್ದಾರೆ.
ಮಾಜಿ ವಿಶ್ವಸುಂದರಿ ಲಾರಾ ದತ್ತಾ 2011ರಲ್ಲಿ ಮಾಜಿ ಟೆನ್ನಿಸ್ ಪ್ಲೇಯರ್ ಮಹೇಶ್ ಭೂಪತಿಯನ್ನ ವಿವಾಹವಾಗಿದ್ರು. ಈ ದಂಪತಿಗೆ ಸೈರಾ ಎಂಬ ಪುತ್ರಿ ಕೂಡ ಇದ್ದಾರೆ. ಇನ್ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಲಾರಾ ಪತಿಯೊಂದಿಗಿನ ಫನ್ನಿ ಮೂಮೆಂಟ್ಗಳನ್ನ ಶೇರ್ ಮಾಡುತ್ತಲೇ ಇರ್ತಾರೆ.