ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್‌ರನ್ನು ಅಭಿನಂದಿಸಿದ ನಟಿ ಪ್ರಿಯಾಂಕಾ ಚೋಪ್ರಾ, ಈ ಬಗ್ಗೆ ತಮ್ಮದೂ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಮುಂಬರುವ ನೆಟ್‌ಫ್ಲಿಕ್ಸ್ ರಿಲೀಸ್ ಅನ್ನು ಪ್ರಮೋಟ್ ಮಾಡಲು ಬಂದಿದ್ದ ವೇಳೆ ಮಾತನಾಡಿದ ಪ್ರಿಯಾಂಕಾ, ಕಮಲಾ ಹ್ಯಾರೀಸ್ ಉಪಾಧ್ಯಕ್ಷೆಯಾಗಿದ್ದು ತನ್ನ ಹಾಗೂ ತಮ್ಮ ಕುಟುಂಬದ ಅನೇಕರಿಗೆ ಭಾವನಾತ್ಮಕ ಕ್ಷಣವಾಗಿತ್ತು ಎಂದಿದ್ದಾರೆ.
ಮುಖದ ಭಾವನೆಯನ್ನ ವ್ಯಕ್ತಪಡಿಸುತ್ತೆ ಅಮಿತಾಬ್ ಬಚ್ಚನ್ ಧರಿಸಿದ ಈ ವಿಶೇಷ ಮಾಸ್ಕ್…!
“ರಾಷ್ಟ್ರಾಧ್ಯಕ್ಷರು ಅಥವಾ ಪ್ರಧಾನ ಮಂತ್ರಿಯಂಥ ಆಡಳಿತದ ಮುಂಚೂಣಿ ಹುದ್ದೆಗಳಲ್ಲಿ ಅನೇಕ ಮಹಿಳೆಯರನ್ನು ಭಾರತ ಕಂಡಿದ್ದು, ಅಮೆರಿಕ ಸಹ ಇಂಥ ಕ್ಲಬ್ ಸೇರುವುದು ಸಂತಸದ ವಿಚಾರ. ವೆಲ್‌ಕಮ್ ಟು ದಿ ಕ್ಲಬ್ ಅಮೆರಿಕ. ಇಷ್ಟು ಹೇಳಲು ನಾನು ಇಚ್ಛಿಸುತ್ತೇನೆ. ಇಂಥ ಇನ್ನಷ್ಟು ನಿದರ್ಶನಗಳು ಸೃಷ್ಟಿಯಾಗಲಿ” ಎಂದು ನಟಿ ಹೇಳಿದ್ದಾರೆ.
https://www.instagram.com/p/CKn_0WiFKz2/?utm_source=ig_web_copy_link