ಭಾರತೀಯರಲ್ಲಿ ಬಹುತೇಕ ಮಂದಿಗೆ ಬಾಲಿವುಡ್ ಮ್ಯೂಸಿಕ್‌ನ ಬೀಟ್‌ಗಳು ಎಂದರೆ ಬಹಳ ಇಷ್ಟ. ಹೈ ಎನರ್ಜಿಯ ಈ ಬೀಟ್‌ಗಳು ಭಾರತೀಯ ಸಿನಿಮಾದ ಅತ್ಯಂತ ಪ್ರಮುಖ ಅಂಗವಾಗಿದೆ.
ಭಾರತೀಯ ಸಿನಿಮಾ ಎಂದರೆ ಅದು ಬರೀ ಬಾಲಿವುಡ್ ಮಾತ್ರವಲ್ಲ, ಪ್ರಾದೇಶಿಕ ಸಿನಿಮಾ ಉದ್ಯಮಗಳೂ ಸಹ ಬಹಳಷ್ಟಿವೆ. ಅವುಗಳಲ್ಲಿ ಭೋಜ್ಪುರಿ ಗೀತೆಗಳಿಗೂ ಸಹ ಜಗತ್ತಿನಾದ್ಯಂತ ಭಾರೀ ಬೇಡಿಕೆ ಇದೆ.
ಅಮೆರಿಕದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆದ ರಿಕಿ ಪಾಂಡ್, ತಮ್ಮ ಮೆಚ್ಚಿನ ಭೋಜ್ಪುರಿ ಗಾಯನವೊಂದಕ್ಕೆ ಹೆಜ್ಜೆ ಹಾಕುತ್ತಾ ವಿಡಿಯೋವೊಂದನ್ನು ಮಾಡಿಕೊಂಡು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂತರ್ಜಾಲದಲ್ಲಿ ಸಖತ್ ಜನಪ್ರಿಯವಾದ ಲಾಲಿಪಪ್ ಹಾಡಿಗೆ ರಿಕಿ ಸ್ಟೆಪ್ ಹಾಕಿದ್ದಾರೆ. ವಾಷಿಂಗ್ಟನ್ ಮೂಲದ ಗ್ರಾಫಿಕ್ಸ್ ಡಿಸೈನರ್ ಆದ ರಿಕಿ ಬಲೇ ಜಾಲಿಯಾಗಿ ಸ್ಟೆಪ್ ಹಾಕುತ್ತಿರುವನ್ನು ನೋಡಬಹುದಾಗಿದೆ.
https://www.instagram.com/p/CKNlxADB11W/?utm_source=ig_web_copy_link
https://www.instagram.com/p/CKLAkgRBxHm/?utm_source=ig_web_copy_link
https://www.instagram.com/p/CKIcYbyhhrz/?utm_source=ig_web_copy_link
https://www.instagram.com/p/CKF3I1UBoVg/?utm_source=ig_web_copy_link