
ಇಡೀ ವಿಶ್ವದಲ್ಲಿ ಬಾಲಿವುಡ್ ಪ್ರಸಿದ್ಧವಾಗಿದೆ ಎಂಬುದಕ್ಕೆ ಬೇರೆ ಸಾಕ್ಷ್ಯ ಬೇಡ. ಬಾಲಿವುಡ್ ನಟ, ನಟಿಯರು ವಿಶ್ವದಾದ್ಯಂತ ಫ್ಯಾನ್ ಫಾಲೋವರ್ ಗಳನ್ನು ಹೊಂದಿದ್ದಾರೆ. ಜಾಲತಾಣಗಳಲ್ಲಿ ಹುಡುಕಿದರೆ, ಬಾಲಿವುಡ್ ಫ್ಯಾನ್ ಗಳು ಅವರನ್ನು ವಿಶ್ವದ ಬೇರೆ, ಬೇರೆ ಕಡೆ ಅನುಕರಿಸುವ ಸಾಕಷ್ಟು ವಿಡಿಯೋಗಳು ಸಿಗುತ್ತವೆ.
ಇತ್ತೀಚೆಗೆ ಇಂಡೋನೇಷ್ಯಾದ ನೆಲ್ಲಿ ಜಮಿತಾ ಎಂಬ ಅಭಿಮಾನಿಯೊಬ್ಬಳು ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ನೃತ್ಯ ಹಾಗೂ ಹಾಡೊಂದನ್ನು ರಿಕ್ರಿಯೇಟ್ ಮಾಡಿದ್ದಾಳೆ. ಪ್ರೀತಿ ಜಿಂಟಾ ಹಾಗೂ ಬಾಬಿ ಡಿಯೋಲ್ ಅವರು ನಟಿಸಿದ ಸೋಲ್ಜರ್ ಚಿತ್ರದ “ಮೇರೆ ಕಾಬೊ ಮೆ ಜೊ ಆಯಾ” ಹಾಡನ್ನು ಮರು ಸೃಷ್ಟಿ ಮಾಡಲಾಗಿದೆ.
ನೆಲ್ಲಿ ಜಮಿತಾ ವಿಡಿಯೋದಲ್ಲಿ ಪ್ರೀತಿ ಅವರ ಡಾನ್ಸ್ ಸ್ಟೆಪ್ ಮಾತ್ರವೇ ಅಲ್ಲ, ವೇಷ ಭೂಷಣ, ಮೇಕಪ್, ಆ್ಯಕ್ಷನ್ ಎಲ್ಲವನ್ನೂ ಪಕ್ಕಾ ಕಾಪಿ ಮಾಡಿದ್ದಾರೆ. ವಿಡಿಯೋವನ್ನು ಯೂಟ್ಯೂಬ್ ಗೆ ಅಪ್‌ಲೋಡ್ ಮಾಡಿದ್ದು, 6 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಭಾರಿ ಪ್ರತಿಕ್ರಿಯೆಗಳು ಬಂದಿವೆ.