ಸೀರೆ ಹಾಗೂ ಸ್ನೀಕರ್ಸ್ಧಾರಿಯಾಗಿ ’ಘೇಂಡಾ ಫೂಲ್’ ಹಾಡಿಗೆ ಸ್ಟೆಪ್ ಹಾಕಿದ್ದ 24 ವರ್ಷದ ಎಶ್ನಾ ಕುಟ್ಟಿ ಆನ್ಲೈನ್ ನಲ್ಲಿ ಸದ್ದು ಮಾಡಿದ್ದರು. ಇದೀಗ ಸೀರೆಯುಟ್ಟ ಮತ್ತೊಬ್ಬ ನೀರೆ, ಅಮೆರಿಕದ ಮೆಟಲ್ ಬ್ಯಾಂಡ್ ಸಿಂಫನಿ ಎಕ್ಸ್ನ ’ಸೀ ಆಫ್ ಲಯನ್ಸ್’ ವಾದ್ಯವನ್ನು ತನ್ನ ಗಿಟಾರ್ನಲ್ಲಿ ನುಡಿಸುವ ಮೂಲಕ ವೈರಲ್ ಆಗಿದ್ದಾರೆ.
ನಿಲಂಜನಾ ಘೋಷ್ ದಸ್ತಿದಾರ್ ಹೆಸರಿನ ಈ ಮಹಿಳೆಯಿಂದ ಮೂಡಿ ಬಂದ ವಾದ್ಯ ಕಚೇರಿಯ ವಿಡಿಯೋವನ್ನು @sashiwapang ಎಂಬ ಟ್ವಿಟರ್ ಬಳಕೆದಾರ ತಮ್ಮ ಪ್ರೊಫೈಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಭಾರತೀಯ ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಮೆಟಲ್ ವಾದ್ಯಗಳ ಫ್ಯೂಶನ್ ಅನ್ನು ಒಗ್ಗೂಡಿಸಿದ ವಾದ್ಯವೊಂದನ್ನು ನುಡಿಸಿದ್ದಾರೆ ಘೋಷ್