ಕೋವಿಡ್-19 ಸೋಂಕಿನಿಂದ ಚೇತರಿಕೆ ಕಾಣುತ್ತಲೇ ಭಾರೀ ಖುಷಿ ಪಟ್ಟ ಮಧ್ಯ ಪ್ರದೇಶದ ಎಂಟು ಮಂದಿಯ ಕುಟುಂಬವೊಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಕುಣಿದು ಕುಪ್ಪಳಿಸಿದೆ. ಇವರ ಈ ನೃತ್ಯ ಪ್ರದರ್ಶನವು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಶೇರ್ ಆಗಿದೆ.
ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರೆ ಸಿನಿಮಾದ ’ಚಿಂತಾ ಕರ್ಕೇ ಕ್ಯಾ ಪಾಯೇಗಾ, ಮರ್‌ನೇ ಸೆ ಪೆಹಲೇ ಮರ್ ಜಾಯೇಗಾ’ ಹಾಡಿಗೆ ಈ ಕುಟುಂಬದ ಮಂದಿ ಹೆಜ್ಜೆ ಹಾಕಿದ್ದಾರೆ.
ಇಲ್ಲಿನ ಕಾಟ್ನಿ ಜಿಲ್ಲೆಯಲ್ಲಿರುವ ಕುಟುಂಬವೊಂದರ 19 ಮಂದಿಯನ್ನು, ಕೊರೊನಾ ಸೋಂಕಿಗೆ ಪಾಸಿಟಿವ್ ಆಗಿ ಕಂಡು ಬರುತ್ತಲೇ ಅವರನ್ನೆಲ್ಲಾ ಐಸೋಲೇಷನ್ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಆಗಸ್ಟ್ 15ರಂದು ಅವರೆಲ್ಲಾ ಗುಣಮುಖರಾದ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.
https://twitter.com/Anurag_Dwary/status/1295622996694986752?ref_src=twsrc%5Etfw%7Ctwcamp%5Etweetembed%7Ctwterm%5E1295622996694986752%7Ctwgr%5E&ref_url=https%3A%2F%2Fwww.ndtv.com%2Findia-news%2Fwatch-madhya-pradesh-family-of-8-dances-to-bollywood-tunes-after-recovering-from-covid-19-2281314