ಕಲೆಯನ್ನೇ ನಂಬಿ ಆರಾಧಿಸುವ ಅನೇಕರು ಮಾರಕ ಖಾಯಿಲೆಗೆ ತುತ್ತಾಗಿ ಜೀವ ಬಿಟ್ಟಂತಹ ಕತೆಗಳನ್ನ ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಅಲ್ಝೈಮೇರ್ ಎಂಬ ಮೆದುಳು ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದ ನೃತ್ಯಗಾರ್ತಿಯೊಬ್ಬರ ಮನಕಲಕುವ ವಿಡಿಯೋ ವೈರಲ್ ಆಗಿದೆ.
ಫೆಲಿಪೆ ಟ್ರೈಸ್ತನ್ ಎಂಬವರು ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ಬ್ಯಾಲ್ಲೆರಿನಾ ನೃತ್ಯಗಾರ್ತಿಯಾಗಿದ್ದ ಮಾರ್ಟಾ ಸಿ. ಗೊಂಝಲೆಝ್ ಅಲ್ಝೈಮೇರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.
ವೀಲ್ ಚೇರ್ನಲ್ಲೇ ಇದ್ಧ ವೃದ್ಧೆಗೆ ಹಾಡನ್ನ ಕೇಳಿಸುತ್ತಿದ್ದಂತೆಯೇ ಆಕೆ ಅಲ್ಲೇ ಕೂತು ಡ್ಯಾನ್ಸ್ ಮಾಡುವ ದೃಶ್ಯ ನೆಟ್ಟಿಗರ ಮನ ಗೆದ್ದಿದೆ. ಅಂದ ಹಾಗೆ ಮಾರ್ಟಾ 2019ರಲ್ಲಿ ಅಲ್ಝೈಮರ್ನಿಂದಾಗಿ ಮೃತರಾಗಿದ್ದಾರೆ.
ನೆನಪಿನ ಶಕ್ತಿ ಕೊರತೆ ಕಾಯಿಲೆಯಿಂದ ಬಳಲುತ್ತಿದ್ದರೂ ಸಹ ಹಾಡನ್ನ ಕೇಳಿದೊಡನೆಯೇ ಮತ್ತೊಮ್ಮೆ ನೃತ್ಯಗಾರ್ತಿಯಂತೆ ಕುಣಿಯಲೆತ್ನಿಸಿದ ಈ ವಿಡಿಯೋ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.
https://twitter.com/felipetristan/status/1325562270861103104?ref_src=twsrc%5Etfw%7Ctwcamp%5Etweetembed%7Ctwterm%5E1325644213401251846%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fwatch-former-ballerina-with-alzheimers-rejoices-her-old-dance-to-swan-lake-in-heart-warming-video-3065669.html