ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ದಾಂಪತ್ಯ ಜೀವನದಲ್ಲಿ ಹೊಸ ಪರ್ವ ಆರಂಭವಾಗಿದ್ದು, ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾರೆ. ಈ ಸುದ್ದಿ ಗುರುವಾರ ಇಡೀ ದಿನ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ವಿರುಷ್ಕಾ ದಂಪತಿ ಪೋಸ್ಟ್ ಮಾಡಿದ್ದ ಫೋಟೋ ವೈರಲ್ ಆಗುತ್ತಿದ್ದಂತೆ, ನಟ, ಕಾಮಿಡಿಯನ್ ಡಾನಿಶ್ ಸೇಠ್ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಇದರಲ್ಲಿ ಡಾನಿಶ್, ವಿರುಷ್ಕಾ ದಂಪತಿಯ ಸಿಹಿ ಸುದ್ದಿಯನ್ನು ಮಾಧ್ಯಮದವರು ಹೇಗೆ ತೋರಿಸಬಹುದು ಎಂದು ಹೇಳಿದ್ದಾರೆ.
ಸೇಠ್ ಅವರ ಈ ವಿಡಿಯೊ ಇದೀಗ ಭಾರಿ ವೈರಲ್ ಆಗಿದೆ. ಸೆಲೆಬ್ರಿಟಿಗಳಾದ ಸೈನಾ ನೆಹವಾಲ್, ಸುರೇಶ್ ರೈನಾ ಸೇರಿದಂತೆ ಅನೇಕರು ಈ ಪೋಸ್ಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.
https://twitter.com/DanishSait/status/1298870808270368774?ref_src=twsrc%5Etfw%7Ctwcamp%5Etweetembed%7Ctwterm%5E1298870808270368774%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fvirushka-ka-bada-khulasa-danish-sait-mocks-media-coverage-on-virat-anushkas-first-baby-2824621.html