
ತಮಿಳು ನಟ ವಿಶಾಲ್ ಅವರು ‘ಲಾಠಿ’ ಚಿತ್ರೀಕರಣದ ವೇಳೆ ಗಂಭೀರ ಗಾಯಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಸ್ಟಂಟ್ ಸೀಕ್ವೆನ್ಸ್‌ನ ಚಿತ್ರೀಕರಣದ ಸಮಯದಲ್ಲಿ ಅವರು ಗಾಯಗೊಂಡಿದ್ದು, ಮೂರು ವಾರಗಳ ಕಾಲ ಚಿಕಿತ್ಸೆ, ವಿಶ್ರಾಂತಿಗಾಗಿ ಕೇರಳಕ್ಕೆ ತೆರಳಲಿದ್ದಾರೆ.
ಅವರು ಗುಣಮುಖರಾದ ನಂತರ, ಚಿತ್ರದ ಮುಂದಿನ ಶೆಡ್ಯೂಲ್ ಪ್ರಾರಂಭವಾಗುವ ಸಾಧ್ಯತೆಯಿದೆ. ಗಾಯಗೊಂಡಿರುವ ಸುದ್ದಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಹಸ ದೃಶ್ಯದ ವಿಡಿಯೊ ಕೂಡ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಎ ವಿನೋದ್‌ಕುಮಾರ್ ನಿರ್ದೇಶನ ಮಾಡಿದ್ದಾರೆ. ರಮಣ ಮತ್ತು ನಂದ ಅವರ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ಸ್ಯಾಮ್ ಸಿಎಸ್ ಸಂಗೀತ ಮತ್ತು ಎಂ ಬಾಲಸುಬ್ರಮಣ್ಯಂ ಛಾಯಾಗ್ರಹಣವಿದೆ.