ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ಅನುಷ್ಕಾ ಪತಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದರು. ಈ ಮಧ್ಯೆ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಯೋ ಬದಲಿಸಿಕೊಂಡಿದ್ದಾರೆ.
ವಿರಾಟ್ ಟ್ವಿಟರ್ ಬಯೋದಲ್ಲಿ A proud husband and father! ಎಂದು ಬಯೋ ಬದಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕೊಹ್ಲಿ, ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಕೊಹ್ಲಿ-ಅನುಷ್ಕಾ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋ ಮಾಡಿದ್ದಾರೆ ಕೊಹ್ಲಿ.
ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿಷ್ಯ ಗೊತ್ತಾಗ್ತಿದ್ದಂತೆ ಆಸ್ಪತ್ರೆ ಮುಂದೆ ಜನರ ದಂಡು ನೆರೆದಿತ್ತು. ಛಾಯಾಗ್ರಾಹಕರು ಮಗುವಿನ ಫೋಟೋಕ್ಕೆ ಕಾಯ್ತಿದ್ದರು. ಆದ್ರೆ ಮಗುವಿನ ಖಾಸಗಿತನಕ್ಕೆ ಧಕ್ಕೆ ಮಾಡದಂತೆ ಕೊಹ್ಲಿ ಹಾಗೂ ಅನುಷ್ಕಾ ವಿನಂತಿ ಮಾಡಿಕೊಂಡಿದ್ದಾರೆ. ಎಲ್ಲರೂ ಸಹಕರಿಸಿ ಎಂದು ಕೇಳಿಕೊಂಡಿದ್ದರು.
ಅನುಷ್ಕಾ ಮಗುವಿಗೆ ಏನು ಹೆಸರಿಡ್ತಾರೆ ಎಂಬ ಕುತೂಹಲ ಸದ್ಯ ಎಲ್ಲರಿಗೂ ಇದೆ. ಈಗಾಗಲೇ ಅಭಿಮಾನಿಗಳು ಸಲಹೆ ನೀಡಲು ಶುರು ಮಾಡಿದ್ದಾರೆ. ಹಾಗೆ ಮಗುವಿನ ಮುಖ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.