
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಬಾಲಕಿ 1957ರಲ್ಲಿ ತೆರೆ ಕಂಡ ಮದರ್ ಇಂಡಿಯಾ ಎಂಬ ಸಿನಿಮಾದ ಗೂಂಘಟ್ ನಹಿ ಕೋಲೂಂಗಿ ಸೈಯ್ಯಾ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾಳೆ.
ಈ ಬಾಲಕಿ ನೃತ್ಯ ಮಾಡುತ್ತಿರುವ ವಿಡಿಯೋವನ್ನ ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ ನಟಿ ಮಾಧುರಿ ದೀಕ್ಷಿತ್ ಈಕೆ ತುಂಬಾ ಸುಂದರವಾಗಿ ನೃತ್ಯ ಮಾಡಿದ್ದಾಳೆ ಎಂದು ಹಾಡಿ ಹೊಗಳಿದ್ದಾರೆ. ಇಂತಹ ಇನ್ನೂ ಅನೇಕ ಪ್ರತಿಭೆಗಳನ್ನ ಹುಡುಕಬೇಕಿದೆ ಎಂದು ಬರೆದುಕೊಂಡಿದ್ದಾರೆ.