ಬಾಲಿವುಡ್ ನಟಿ ಕಂಗನಾ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ಮಾತಿನ ಯುದ್ಧ ಮುಂದುವರೆದಿದೆ. ಇವರಿಬ್ಬರ ನಡುವಿನ ಜಗಳದ ಮಧ್ಯೆ, ಮಹಾರಾಷ್ಟ್ರ ಸರ್ಕಾರ ಈಗ ಶೇಖರ್ ಸುಮನ್ ಅವರ ಪುತ್ರ ಅಧ್ಯಯನ್ ಸುಮನ್ ಹಳೆಯ ಸಂದರ್ಶನದ ಆಧಾರದ ಮೇಲೆ ಕಂಗನಾ, ಡ್ರಗ್ಸ್ ಸೇವನೆ ಮಾಡ್ತಿದ್ರಾ ಎನ್ನುವ ಬಗ್ಗೆ ತನಿಖೆ ನಡೆಸಲಿದೆ. ಈ ಸುದ್ದಿ ಹೊರ ಬೀಳ್ತಿದ್ದಂತೆ ಅಧ್ಯಯನ್ ಸುಮನ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅಧ್ಯಯನ್ ಸುಮನ್, ಕಂಗನಾ ಪ್ರಕರಣದಲ್ಲಿ ನನ್ನನ್ನು ಎಳೆಯಬೇಡಿ ಎಂದಿದ್ದಾರೆ. ನಾನು 2016ರಲ್ಲಿ ನೀಡಿದ ಸಂದರ್ಶನವನ್ನು ಈಗ ಎಳೆದು ತರಲಾಗ್ತಿದೆ. ನನಗೂ, ಈಗಿನ ಘಟನೆಗೂ ಸಂಬಂಧವಿಲ್ಲ. ಎರಡು ದಿನಗಳಿಂದ ಹಿಂಸೆಯಾಗ್ತಿದೆ. ದಯವಿಟ್ಟು ನನ್ನನ್ನು ಇದ್ರಲ್ಲಿ ಎಳೆದು ತರಬೇಡಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.
2016ರಲ್ಲಿ ಏನು ಹೇಳಬೇಕಾಗಿತ್ತೋ ಅದನ್ನು ಹೇಳಿದ್ದ. 11-12 ವರ್ಷಗಳ ಕಾಲ ಸಾಕಷ್ಟು ಕಷ್ಟ ಎದುರಿಸಿದ್ದೇನೆ. ಈಗ ಎಲ್ಲವನ್ನೂ ಮರೆತು ಜೀವನ ನಡೆಸಲು ಮುಂದಾಗಿದ್ದೇನೆ. ಕಂಗನಾ ಜೊತೆ ಯಾವುದೇ ಸಂಬಂಧವಿಲ್ಲ. ಮುಂದೆಯೂ ಯಾವುದೇ ಸಂಬಂಧವಿರುವುದಿಲ್ಲ. ನಮ್ಮೆಲ್ಲ ಹೋರಾಟ ಒಂದೆ ಸುಶಾಂತ್ ಸಾವಿಗೆ ನ್ಯಾಯ ಸಿಗುವುದು ಎಂದು ಅಧ್ಯಯನ್ ಸುಮನ್ ಹೇಳಿದ್ದಾರೆ.