ಈ ವರ್ಷ ದಕ್ಷಿಣ ಭಾರತದ ಚಿತ್ರಗಳು ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡಿದಿದ್ದು, ಅದನ್ನು ‘ವಿಕ್ರಾಂತ್ ರೋಣ’ ಮೂಲಕ ಸುದೀಪ್ ಮುಂದುವರೆಸಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಬಿಡುಗಡೆಯಾದಲ್ಲೆಲ್ಲಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 100 ಕೋಟಿ ರೂ. ಕ್ಲಬ್ ಸೇರಿದೆ.
ಬಿಡುಗಡೆಯಾದ 4 ದಿನದ ಅವಧಿಯಲ್ಲಿ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.
ಗುರುವಾರ: 33-35 ಕೋಟಿ ರೂ. (ಅಂದಾಜು)
ಶುಕ್ರವಾರ: 20-25 ಕೋಟಿ ರೂ. (ಅಂದಾಜು)
ಶನಿವಾರ: 23-25 ಕೋಟಿ ರೂ. (ಅಂದಾಜು)
ಭಾನುವಾರ: 25 ಕೋಟಿ ರೂ. (ಅಂದಾಜು)
ಒಟ್ಟು: 100 ಕೋಟಿ ರೂ. (ಅಂದಾಜು) ಕಲೆಕ್ಷನ್ ಮಾಡಿದೆ.
ಮೊದಲ ದಿನದಲ್ಲಿ 33-35 ಕೋಟಿ ರೂಪಾಯಿ ಗಳಿಸಿದ ವಿಕ್ರಾಂತ್ ರೋಣ ನಂತರ ಮೂರು ದಿನಗಳಲ್ಲಿ ಸುಮಾರು 80 ಕೋಟಿ ರೂ.ಗಳಿಸಿತು. ನಾಲ್ಕನೇ ದಿನ ಭಾನುವಾರವೂ ಅಭಿಮಾನಿಗಳು, ಪ್ರೇಕ್ಷಕರು ಮುಗಿಬಿದ್ದ ಕಾರಣ ಕಲೆಕ್ಷನ್ ಜಾಸ್ತಿಯಾಗಿದೆ. ವಿಶ್ವಾದ್ಯಂತ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಲಲಾಗಿದೆ.
‘ಪುಷ್ಪ’, ‘RRR’ ಮತ್ತು ‘KGF 2’ ನಂತರ ಯಶಸ್ವಿ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ‘ವಿಕ್ರಾಂತ್ ರೋಣ’ ಒಂದಾಗಿದೆ.