ಚೆನ್ನೈ: ನಟ ವಿಕ್ರಮ್ ಆರೋಗ್ಯವಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸೂರ್ಯನಾರಾಯಣನ್ ತಿಳಿಸಿದ್ದು, ಶುಕ್ರವಾರ ಮಾಧ್ಯಮಗಳಲ್ಲಿ ವರದಿಯಾರುವಂತೆ ನಟನಿಗೆ ಹೃದಯಾಘಾತವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆತ್ಮೀಯ ಅಭಿಮಾನಿಗಳು ಮತ್ತು ಹಿತೈಷಿಗಳೇ, ಚಿಯಾನ್ ವಿಕ್ರಮ್ ಅವರಿಗೆ ಎದೆಯಲ್ಲಿ ಸ್ವಲ್ಪ ಅಸ್ವಸ್ಥತೆ ಇತ್ತು. ಅದಕ್ಕಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ. ವರದಿಗಳು ತಪ್ಪಾಗಿ ಹೇಳುವಂತೆ ಅವರಿಗೆ ಹೃದಯಾಘಾತವಾಗಿರಲಿಲ್ಲ. ಈ ಪರಿಣಾಮದ ವದಂತಿಗಳನ್ನು ಕೇಳಿ ನಮಗೆ ನೋವಾಗಿದೆ ಎಂದು ಹೇಳಿದ್ದಾರೆ.
ಈ ಸಮಯದಲ್ಲಿ ಅವರಿಗೆ ಮತ್ತು ಕುಟುಂಬಕ್ಕೆ ಅಗತ್ಯವಿರುವ ಗೌಪ್ಯತೆಯನ್ನು ಕಾಪಾಡುವಂತೆ ವಿನಂತಿಸುತ್ತೇವೆ. ನಮ್ಮ ಪ್ರೀತಿಯ ಚಿಯಾನ್ ಈಗ ಚೆನ್ನಾಗಿದ್ದಾರೆ. ಒಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ವಿಕ್ರಮ್ ಅವರನ್ನು ಗುರುವಾರ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದು, ವಿಕ್ರಮ್ ಚೆನ್ನಾಗಿದ್ದಾರೆ. ಒಂದು ದಿನದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಶುಕ್ರವಾರ ಚೆನ್ನೈನಲ್ಲಿ ನಡೆಯಲಿರುವ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ವಿಕ್ರಮ್ ಉಪಸ್ಥಿತರಿರಲ್ಲ ಎಂದು ಹೇಳಲಾಗಿದೆ.