![Saroj Khan passes away due to cardiac arrest-मशहूर ...](https://resize.indiatv.in/resize/newbucket/1200_675/2020/07/sarojkhan-1593732469.jpg)
ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನರಾಗಿದ್ದಾರೆ. 72 ವರ್ಷದ ಸರೋಜ್ ಖಾನ್ ಅವರು ಉಸಿರಾಟ ಸೇರಿದಂತೆ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು.
ಅವರನ್ನು ಮುಂಬೈನ ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಜೂನ್ 20 ರಿಂದ ಆಸ್ಪತ್ರೆಯಲ್ಲಿದ್ದ ಸರೋಜ್ ಖಾನ್ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
‘ನಾಮ್’ ಚಿತ್ರದ ಮೂಲಕ ನೃತ್ಯ ಸಂಯೋಜಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು 40 ವರ್ಷಗಳ ಕಾಲ ಸಿನಿಮಾಗಳಲ್ಲಿ ನೃತ್ಯ ಸಂಯೋಜಕಿ ಆಗಿ ಕೆಲಸ ಮಾಡಿದ್ದಾರೆ.