ಚಂಡೀಘಡದಲ್ಲಿ ರಾಜ್ ಮೆಹ್ತಾರ ‘ಜುಗ್ ಜುಗ್ ಜಿಯೋ’ ಸಿನಿಮಾ ಶೂಟಿಂಗ್ನಲ್ಲಿದ್ದ ನಟ ವರುಣ್ ಧವನ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೂಲಿ ನಂ. 1 ರ ನಟ ಇನ್ಸ್ಟಾಗ್ರಾಂನಲ್ಲಿ ತಮಗೆ ಕೊರೊನಾ ದೃಢಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಶೂಟಿಂಗ್ ಮಾಡುವಾಗ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಿದ್ದೇವೆ. ಆದರೂ ಸಂಪರ್ಕಿತರು ಹೆಚ್ಚು ಜಾಗೂರಕರಾಗಿರಿ ಅಂತಾ ಧವನ್ ಮನವಿ ಮಾಡಿದ್ದಾರೆ.
ಧವನ್ಗೆ ಕೊರೊನಾ ಸೋಂಕು ದೃಢವಾಗುತ್ತಿದ್ದಂತೆ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಹಾಗೂ ಧವನ್ ಜೊತೆ ನಿಕಟ ಸಂಪರ್ಕದಲ್ಲಿದ್ದ ನೀತು ಕಪೂರ್, ಅನಿಲ್ ಕಪೂರ್ ಹಾಗೂ ಮನಿಷ್ ಪೌಲ್ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಇದರಲ್ಲಿ ಅನಿಲ್ ಕಪೂರ್ ಹೊರತುಪಡಿಸಿ ಮಿಕ್ಕವರಿಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದೆ .
ವರುಣ್ ಧವನ್, ನೀತು ಕಪೂರ್ & ಮನಿಷ್ ಪೌಲ್ಗೆ ಕೊರೊನಾ ಸೋಂಕು
07-12-2020 7:56PM IST / No Comments / Posted In: Corona, Corona Virus News, Latest News, Entertainment