ಉತ್ತರ ಪ್ರದೇಶದ ಡಿಯೋರೇನಿಯಾ ನಿವಾಸಿ 20 ವರ್ಷದ ತೇಜ್ ಬಹದ್ದೂರ್ ಸಿಂಗ್ ಕೌನ್ ಬನೇಗಾ ಕರೋಡ್ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿಯನ್ನ ಗೆದ್ದಿದ್ದಾರೆ. ತೇಜ್ ಬಹದ್ದೂರ್ ಸಿಂಗ್ ಸಂಸ್ಕೃತ ಶಿಕ್ಷಕನ ಪುತ್ರನಾಗಿದ್ದಾನೆ.
ಐಎಎಸ್ ಅಧಿಕಾರಿಯಾಗುವ ಕನಸನ್ನ ಹೊಂದಿರುವ ತೇಜ್ ಕೃಷಿ ಜಮೀನಿನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೇ ಲಾಕ್ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕೂಡ ನಡೆಸುತ್ತಿದ್ದರು.
ತೇಜ್ರ ಡಿಪ್ಲೋಮೋ ವ್ಯಾಸಂಗಕ್ಕಾಗಿ ಅವರ ತಾಯಿ ತಮ್ಮ ಆಭರಣಗಳನ್ನ ಅಡವಿಟ್ಟಿದ್ದರಂತೆ. ಹೀಗಾಗಿ ಇದೀಗ 50 ಲಕ್ಷ ರೂಪಾಯಿ ಗೆದ್ದಿರುವ ತೇಜ್ ಮೊದಲು ತಮ್ಮ ತಾಯಿಯ ಚಿನ್ನವನ್ನ ವಾಪಸ್ ತರಲು ನಿರ್ಧರಿಸಿದ್ದಾರಂತೆ. ಅಲ್ಲದೇ ತನ್ನ ಹಾಗೂ ಸಹೋದರನ ಶಿಕ್ಷಣ, ಒಂದು ಪುಟ್ಟ ಮನೆ ಮತ್ತು ಅಕ್ಕಪಕ್ಕದ ಮಕ್ಕಳಿಗೆ ಸಣ್ಣ ಶಾಲಾ ಕಟ್ಟಡವನ್ನ ಮಾಡಿಕೊಡುವ ಇರಾದೆ ಹೊಂದಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ನನ್ನ ತಂದೆ ಕೆಲಸವನ್ನ ಕಳೆದುಕೊಂಡ್ರು. ಹೀಗಾಗಿ ಮನೆಯ ಜವಾಬ್ದಾರಿ ನನ್ನ ಹೆಗಲೇರಿತ್ತು. ನಾನು ಕೂಲಿ ಕೆಲಸ ಮಾಡಲು ಆರಂಭಿಸಿದೆ ಎಂದು ತಮ್ಮ ನೋವನ್ನ ಹೇಳಿಕೊಂಡ್ರು.