alex Certify ನಟಿ ಕಂಗನಾ ಬಾಲ್ಯದ ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕಂಗನಾ ಬಾಲ್ಯದ ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಬಾಲಿವುಡ್ ನ ಪ್ರತಿಭಾವಂತ ನಟಿ ಕಂಗನಾ ರಣಾವತ್ ತಮ್ಮ ಕುರಿತು ಕೇಳಿ ಬಂದ ಯಾವುದೇ ಹೇಳಿಕೆಗಳಿಗೂ ತಲೆಕೆಡಿಸಿಕೊಳ್ಳದೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರು ನೀಡುತ್ತಿರುವ ಹೇಳಿಕೆಗಳು ಅವರನ್ನು ಸದಾ ಸುದ್ದಿಯಲ್ಲಿರುವಂತೆ ಮಾಡಿವೆ.

ಈ ಮಧ್ಯೆ ಕಂಗನಾ ರಣಾವತ್ ರ ಖಾಸಗಿ ಜೀವನಕ್ಕೆ ಧಕ್ಕೆ ತರುವಂತಹ ಹಲವಾರು ಹೇಳಿಕೆಗಳು ಹೊರ ಬಿದ್ದಿದ್ದರೂ ಇದ್ಯಾವುದಕ್ಕೂ ಕೇರ್ ಮಾಡದ ಕಂಗನಾ, ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತವರಿಗೆ ನನ್ನ ಸಾಮರ್ಥ್ಯ ತೋರಿಸುವ ಮೂಲಕ ಉತ್ತರ ನೀಡುತ್ತೇನೆ ಎಂದಿದ್ದರು.

ಕಂಗನಾ ರಣಾವತ್ ರ ಖಾಸಗಿ ಬದುಕಿನ ಕೆಲ ವಿವರ ಇಲ್ಲಿದೆ. ಬಾಲ್ಯದಲ್ಲೇ ಚಿತ್ರರಂಗದತ್ತ ಆಕರ್ಷಿತರಾಗಿದ್ದ ಕಂಗನಾ, ತಂದೆಯ ವಿರೋಧದ ನಡುವೆಯೂ ಮನೆ ಬಿಟ್ಟು ಚಿತ್ರರಂಗದ ಮೊದಲ ಮೆಟ್ಟಿಲಾದ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟಿದ್ದರು. ಸ್ನೇಹಿತೆ ಜಸ್ಪ್ರೀತ್ ಜೊತೆ ರೂಮ್ ಶೇರ್ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ತಂದೆ 50 ಸಾವಿರ ರೂ. ನೀಡಿದರೂ ಸ್ವಾಭಿಮಾನಿ ಕಂಗನಾ ಅದನ್ನು ಸ್ವೀಕರಿಸಿರಲಿಲ್ಲ.

ಚಂಡೀಘರ್ ನ ಡಿಎವಿ ಮಾಡೆಲ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ್ದ ಕಂಗನಾ, ಮಾಡೆಲಿಂಗ್ ಕ್ಷೇತ್ರದತ್ತ ಆಕರ್ಷಿತರಾಗಿದ್ದ ಕಾರಣ ಕಾಲೇಜ್ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಕಂಗನಾ ಸಹೋದರಿ ರಂಗೋಲಿ ವಿಕೃತನೊಬ್ಬನಿಂದ ಆಸಿಡ್ ದಾಳಿಗೊಳಗಾಗಿದ್ದ ವೇಳೆ ಆಕೆ ಮತ್ತೆ ಎಂದಿನಂತಾಗಲು ಕಂಗನಾ ಬಹು ಮುಖ್ಯ ಪಾತ್ರ ವಹಿಸಿದ್ದರು.

ಚಿತ್ರರಂಗದ ಬಗ್ಗೆ ವಿಪರೀತ ಒಲವುಳ್ಳ ಕಂಗನಾ ‘ಕ್ವೀನ್’ ಚಿತ್ರದ ಕೆಲ ಡೈಲಾಗ್ ಗಳನ್ನು ತಾನೇ ಬರೆದಿದ್ದಾಳೆಂದರೇ ನೀವು ನಂಬಲೇಬೇಕು. ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟಿಸಿರುವ ಕಂಗನಾ, ಚಿತ್ರರಂಗವೇ ನನ್ನ ಮೊದಲ ಆದ್ಯತೆ ಎನ್ನುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...