ತನ್ನನ್ನು ತಾನು ’ಪ್ರಾಣಿ ಪ್ರಿಯೆ’ ಎಂದು ಕರೆದುಕೊಳ್ಳುವ ಬ್ರಿಟನ್ನ ಮಾಡೆಲ್ ಒಬ್ಬರು ನರಿಯ ತುಪ್ಪಳದಿಂದ ಮಾಡಿದ ಕೋಟ್ ಧರಿಸಿದ ತಮ್ಮ ಚಿತ್ರವೊಂದನ್ನು ಆನ್ಲೈನ್ನಲ್ಲಿ ಶೇರ್ ಮಾಡಿ ಸುದ್ದಿ ಮಾಡುತ್ತಿದ್ದಾರೆ.
ಕೇಟಿ ಪ್ರೈಸ್ ಹೆಸರಿನ 42 ವರ್ಷದ ಈ ಮಾಡೆಲ್ ನರಿಯ ರೋಮಗಳಿರುವ ಚರ್ಮದ ಕೋಟ್ ಒಂದರಲ್ಲಿ ಮಿಂಚುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿರುವ ತಮ್ಮ ಖಾತೆ ಮೂಲಕ ಕೇಟಿ ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.
“ಫರ್ ಲಂಡನ್ನಲ್ಲಿ ಫರ್ನಿಂದ ಸುಂದರವಾಗಿ ಹೆಣೆಯಲಾಗಿದೆ ಈ ವಸ್ತ್ರವನ್ನು. ಈ ಕ್ರಿಸ್ಮಸ್ಗೆ ನಿಮ್ಮ ಪಾಲಿನ ವಿಶೇಷ ವ್ಯಕ್ತಿಗೆ ಗಿಫ್ಟ್ ಮಾಡಲು ಈ ಥರದ ಹ್ಯಾಂಡ್ಮೇಡ್ ವಸ್ತ್ರವೊಂದನ್ನು ಖರೀದಿ ಮಾಡಿ,” ಎಂದು ಕೇಟಿ ತಿಳಿಸಿದ್ದಾರೆ. ಆದರೆ ಆಕೆಯ ಈ ನಡುವಳಿಕೆಗೆ ಈಗ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.