alex Certify ಶೂಟಿಂಗ್ ಸೆಟ್ ನಲ್ಲೇ ನಟಿ ಆತ್ಮಹತ್ಯೆ ಕೇಸ್: ನಟ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೂಟಿಂಗ್ ಸೆಟ್ ನಲ್ಲೇ ನಟಿ ಆತ್ಮಹತ್ಯೆ ಕೇಸ್: ನಟ ಅರೆಸ್ಟ್

ಮುಂಬೈ: ಮುಂಬೈನಲ್ಲಿ ಕಿರುತೆರೆ ನಟಿ ತುನೀಶಾ ಶರ್ಮಾ ಅವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ನಟ ಶೀಜನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಶೀಜನ್ ನನ್ನು ಬಂಧಿಸಲಾಗಿದೆ. ತುನೀಶಾ ಶೀಜನ್ ಖಾನ್‌ನೊಂದಿಗೆ ಸಂಬಂಧವನ್ನು ಮುರಿದುಕೊಳ್ಳುವ ಮೊದಲು ಅವನೊಂದಿಗೆ ಸಂಬಂಧ ಹೊಂದಿದ್ದಳು. ಅದೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗಿದೆ.

ತುನೀಶಾ ಶರ್ಮಾ ತಾಯಿ ನೀಡಿದ ದೂರಿನ ಮೇರೆಗೆ ಶೀಜನ್ ಬಂಧಿಸಲಾಗಿದ್ದು, ಇಂದು ವಸೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಟಿವಿ ಶೋ, ಅಲಿ ಬಾಬಾ: ದಸ್ತಾನ್-ಇ-ಕಾಬೂಲ್‌ ಗಾಗಿ ಶೂಟಿಂಗ್ ಮಾಡುತ್ತಿದ್ದ ತುನೀಶಾ ನೈಗಾಂವ್‌ನಲ್ಲಿನ ಮೇಕಪ್ ರೂಮ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂಬೈನ ವಾಲಿವ್ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಶೀಜನ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...