
ಬಾಲಿವುಡ್‌ನ ಅನಭಿಷಿಕ್ತ ಕಾಮಿಡಿ ಕಿಂಗ್ ಆಗಿರುವ ಜಾನಿ ಲಿವರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ತಮ್ಮ ಡೈಲಾಗ್ ಡೆಲಿವರಿ, ಮುಖಭಾವ ಹಾಗೂ ಮ್ಯಾನರಿಸಂಗಳ ಮೂಲಕ ಎಲ್ಲೆಡೆ ಮನೆಮಾತಾಗಿರುವ ಜಾನಿ, ಇದುವರೆಗೂ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಆಗಸ್ಟ್ 14, 1957ರಲ್ಲಿ ಅಂಧ್ರ ಪ್ರದೇಶದ ಪ್ರಕಾಶಂನಲ್ಲಿ ಜನಿಸಿದ ಜಾನಿ ಲಿವರ್, ಮುಂಬೈನ ಧಾರಾವಿ ಬಳಿ ಇರುವ ಕಿಂಗ್ಸ್ ಸರ್ಕಲ್ ಪ್ರದೇಶದಲ್ಲಿ ಬೆಳೆದರು. ಅವರ 63ನೇ ಹುಟ್ಟುಹಬ್ಬದಂದು ಅಭಿಮಾನಿಗಳು ಅವರ ಪಂಚಿಂಗ್ ಡೈಲಾಗ್‌ಗಳು ಹಾಗೂ ಪಾತ್ರಗಳನ್ನು ಸ್ಮರಿಸುತ್ತಿದ್ದಾರೆ.